ಉಬರಡ್ಕ: ಅಧ್ಯಕ್ಷ ಉಪಾಧ್ಯಕ್ಷತೆಗೆ ತಲಾ ಒಬ್ಬೊಬ್ಬರಿಂದ ನಾಮಪತ್ರ ಸಲ್ಲಿಕೆ

0

ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರ ಆಯ್ಕೆ ಮತ್ತು ಉಪಾಧ್ಯಕ್ಷರ ಆಯ್ಕೆ ಇಂದು ನಡೆಯಲಿದ್ದು, ಈಗಾಗಲೇ ಅಧ್ಯಕ್ಷ ಸ್ಥಾನಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದು‌ ನಾಮಪತ್ರ ಸಲ್ಲಿಕೆಯಾಗಿದೆ.

ಅಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ಪೂರ್ಣಿಮಾ ಸೂಂತೋಡು ನಾಮಪತ್ರ ಸಲ್ಲಿಸಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ಚಿತ್ರಕುಮಾರಿ ನಾಮಪತ್ರ ಸಲ್ಲಿಸಿದ್ದಾರೆ. ಬೇರೆ ಮೀಸಲಾತಿ ಇರದ ಕಾರಣ ಅವಿರೋಧ ಆಯ್ಕೆಯಾಗುವ ಸಂಭವವಿದೆ.‌ ನಾಮಪತ್ರ ಪರಿಶೀಲನೆ, ಹಿಂಪಡೆಯುವುದು ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ.