ಕೋಲ್ಚಾರಿನ ನಾಂಗುಳಿ ಕಣಕ್ಕೂರು ಭಾಗದಲ್ಲಿ ಕಾಡಾನೆ ದಾಳಿ- ಕೃಷಿ ತೋಟ ಅಪಾರ ಪ್ರಮಾಣದಲ್ಲಿ ನಾಶ

0

ಆಲೆಟ್ಟಿ ಗ್ರಾಮದ ಕೋಲ್ಚಾರು ಕಣಕ್ಕೂರು ,ನಾಂಗುಳಿ ಭಾಗದಲ್ಲಿ ಕಳೆದ ರಾತ್ರಿ ಸಮಯದಲ್ಲಿ ಕೃಷಿ ತೋಟಕ್ಕೆ ಕಾಡಾನೆಗಳ ಹಿಂಡು ದಾಳಿ ನಡೆಸಿವೆ. ಕಳೆದ ಕೆಲ ದಿಗಳಿಂದ ಕೋಲ್ಚಾರು ಭಾಗದ ನಾಂಗುಳಿ ,ಕಣಕ್ಕೂರು ಕಡೆಗಳಲ್ಲಿ ನಿರಂತರ ರಾತ್ರಿ ವೇಳೆಯಲ್ಲಿ ಆನೆಗಳ ಹಾವಳಿ ನಡೆಯುತ್ತಿದೆ. ಕೃಷಿ ತೋಟಗಳನ್ನು ಅಪಾರ ಪ್ರಮಾಣದಲ್ಲಿ ನಾಶ ಪಡಿಸಿದೆ.