ಕೆ ಎಸ್ ಗೌಡ ಪದವಿ ಪೂರ್ವ ಕಾಲೇಜು ವರ್ಷ ನಗರ ನಿಂತಿಕಲ್ಲು: ವಿದ್ಯಾರ್ಥಿ ಸಂಘದ ರಚನೆ

0

ಅಧ್ಯಕ್ಷನಾಗಿ ಸ್ರುಜನ್ ಎಂ., ಕಾರ್ಯದರ್ಶಿಯಾಗಿ ರಶ್ವಿನ್ ರೈ ಆಯ್ಕೆ



ಕೆ ಎಸ್ ಗೌಡ ಪದವಿ ಪೂರ್ವ ಕಾಲೇಜು ನಿಂತಿಕಲ್ಲು ಇಲ್ಲಿ 2023-24 ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಚುನಾವಣೆ ನಡೆಯಿತು. ಅಧ್ಯಕ್ಷನಾಗಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಸ್ರುಜನ್ ಎಂ, ಕಾರ್ಯದರ್ಶಿಯಾಗಿ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ರಶ್ವಿನ್ ರೈ ಹಾಗೂ ಜೊತೆ ಕಾರ್ಯದರ್ಶಿಯಾಗಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಹಿತಾಶ್ರಿ ಎಂ. ಕೆ ಆಯ್ಕೆಯಾದರು.


ಉಳಿದಂತೆ, ಕ್ರೀಡಾ ಕಾರ್ಯದರ್ಶಿಗಳಾಗಿ ಶ್ರೀರಾಜ್ ಎಂ ಆರ್ ಮತ್ತು ಪ್ರಥ್ವಿ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಅನ್ವೇಶ್ ಮತ್ತು ಗ್ರೀಷ್ಮ ಆಯ್ಕೆಯಾದರು.
ಪ್ರಜಾಪ್ರಭುತ್ವ ಮಾದರಿಯಲ್ಲಿ ನಡೆದ ಚುನಾವಣೆಯಲ್ಲಿ ಭೌತಶಾಸ್ತ್ರ ಉಪನ್ಯಾಸಕರಾದ ಉಜ್ವಲ್ ಕೆ ಚ್ ಮುಖ್ಯ ಚುನಾವಣಾಧಿಕಾರಿಯಾಗಿ ಮತ್ತು ಉಪನ್ಯಾಸಕಿಯರಾದ ಧನ್ಯ ಕೆ ವಿ, ಪ್ರಿಯಾ ಎಂ, ಜಯಶ್ರೀ ಎಂ ವಿ, ಜ್ಯೋತ್ಸ್ನಾ ಎಂ ಜೆ ಚುನಾವಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು. ಪ್ರಾಚಾರ್ಯರಾದ ಸದಾನಂದ ರೈ ಕೂವೆಂಜ ವಿಜೇತ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು
ಸಂಸ್ಥೆಯ ಅಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್ ಕೆ ಎಸ್, ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.