ಎಸ್ ಎಂ ಎ ಸುಳ್ಯ ರೀಜ್ಯನಲ್ ವಾರ್ಷಿಕ ಕೌನ್ಸಿಲ್ ಹಾಗೂ ಸಾಧಕರಿಗೆ ಅಭಿನಂದನೆ

0

ಕರ್ಮಗಳಲ್ಲಿಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು – ಅಶ್ರಫ್ ಸಖಾಫಿ

ಸುನ್ನೀ ಮಾನೇಜ್ ಮೆಂಟ್ ಅಸೋಸಿಯೇಷನ್ ಎಸ್ ಎಂ ಎ ಸುಳ್ಯ ರೀಜ್ಯನಲ್ ಇದರ ಪ್ರಸಕ್ತ ಸಾಲಿನ ವಾರ್ಷಿಕ ಕೌನ್ಸಿಲ್ ಹಾಗೂ ಸಾಧಕರಿಗೆ ಅಭಿನಂದನೆ ಕಾರ್ಯಕ್ರಮ ಪೆರಾಜೆಯ ಕುವ್ವತುಲ್ ಇಸ್ಲಾಂ ಮದ್ರಸ ಸಭಾಂಗಣದಲ್ಲಿ ನಡೆಯಿತು ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಬೀಜಕೊಚ್ಚಿ ಅಧ್ಯಕ್ಷತೆ ವಹಿಸಿ ಅಸ್ಸಯ್ಯಿದ್ ಫಖ್ರುದ್ದೀನ್ ಹದ್ದಾದ್ ತಂಙಳ್ ಉದ್ಘಾಟಿಸಿದರು.

ಪೆರಾಜೆ ಜುಮಾ ಮಸೀದಿ ಖತೀಬ್ ಇಸ್ಮಾಯಿಲ್ ಝೈನಿ ಕೊಂಡಂಗೇರಿ ಪ್ರಾಸ್ತಾವಿಕ ಭಾಷಣ ಗೈದರು ಎಸ್ ಎಂ ಎ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ವಾರ್ಷಿಕ ವರದಿ ವಾಚಿಸಿ, ಲೆಕ್ಕ ಪತ್ರ ಮಂಡಿಸಿದರು ಎಸ್ ಎಂ ಎ ಬೆಳ್ಳಾರೆ ಝೋನಲ್ ಅಧ್ಯಕ್ಷ ಇಬ್ರಾಹಿಂ ಬೀಡು ಸಮಿತಿಯ ಅವಲೋಕನ ಮತ್ತು ತೆರವಾದ ಸ್ಥಾನ ಗಳಿಗೆ ಸದಸ್ಯರ ಆಯ್ಕೆ ಪ್ರಕೃಯೆ ನಡೆಸಿದರು.

ಗಾಂಧಿನಗರ ಖತೀಬ್ ಅಲ್ ಹಾಜ್ ಅಶ್ರಫ್ ಕಾಮಿಲ್ ಸಖಾಫಿ ವಿಷಯ ಮಂಡಿಸಿ ಕರ್ಮಗಳು ಉದ್ದೇಶ ಶುದ್ಧಿಯಿಂದಾಬೇಕು ಹಾಗೂ ಕರ್ಮಗಳ ಮೌಲ್ಯವನ್ನು ಎತ್ತಿ ಹಿಡಿಯಬೇಕು ತದ್ವಿರುದ್ಧವಾಗಿ ಮೊಹಲ್ಲಾಗಳಲ್ಲಿ ನಡೆಯುವ ಕಾರ್ಯಗಳ ಬಗ್ಗೆ ಉಲಮಾ ಉಮರಾಗಳು ಜಾಗರೂಕರಾಗಬೇಕೆಂದು ಸಲಹೆ ನೀಡಿದರು. ಈ ಸಂದರ್ಭ ಎಸ್ ಜೆ ಎಂ ಸುಳ್ಯ ರೇಂಜ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಬೂಬಕ್ಕರ್ ಮುಸ್ಲಿಯಾರ್ ಬದಿಯಡ್ಕ ರವರನ್ನು ಶಾಲು ಹೊದಿಸಿ ಗೌರವಿಸಲಾಯಿತು. ಕಳೆದ ಸಾಲಿನ ಮದ್ರಸ ಪಬ್ಲಿಕ್ ಪರೀಕ್ಷೆಯಲ್ಲಿ A+ ಗ್ರೇಡ್ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಕಾರಣಕರ್ತರಾದ ಅಧ್ಯಾಪಕರುಗಳನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮ ನಡೆಸಲು ಸಂಪೂರ್ಣ ಸಹಕಾರ ನೀಡಿದ ಪೆರಾಜೆಯ ನೂರುಲ್ ಇಸ್ಲಾಂ ಸಮಿತಿಗೆ ನೆನಪಿನ ಕಾಣಿಕೆಯನ್ನು ಸಮಿತಿ ಅಧ್ಯಕ್ಷ ಶಾಹಿದ್ ಪೆರಾಜೆಯವರಲ್ಲಿ ಹಸ್ತಾಂತರಿಸಲಾಯಿತು.ಎಸ್ ಜೆ ಎಂ ಜಿಲ್ಲಾಧ್ಯಕ್ಷ ಇಬ್ರಾಹಿಂ ಸಖಾಫಿ ಪುಂಡೂರು,ಎಸ್ ಎಂ ಎ ಬೆಳ್ಳಾರೆ ಝೋನಲ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲ ಅಹ್ಸನಿ,ಹನೀಫ್ ಹಾಜಿ ಇಂದ್ರಾಜೆ, ಗಾಂಧಿನಗರ ಜಮಾಅತ್ ಅಧ್ಯಕ್ಷ ಮುಸ್ತಫ ಕೆ ಎಂ,ಸಮಿತಿಯ ಪೂರ್ವಾಧ್ಯಕ್ಷ ಯೂಸುಫ್ ಹಾಜಿ ಬಿಳಿಯಾರು, ಕೋಶಾಧಿಕಾರಿ ಲತೀಫ್ ಹರ್ಲಡ್ಕ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.

ರೀಜ್ಯನಲ್ ವ್ಯಾಪ್ತಿಯ ವಿವಿಧ ಮೊಹಲ್ಲಾಗಳ ಅಧ್ಯಕ್ಷ ಪದಾಧಿಕಾರಿಗಳು,ಉಸ್ತಾದರುಗಳು ಭಾಗವಹಿಸಿದರು.
ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಸ್ವಾಗತಿಸಿ ಉಪಾಧ್ಯಕ್ಷ ಅಬ್ದುಲ್ ಹಮೀದ್ ಸುಣ್ಣಮೂಲೆ ವಂದಿಸಿದರು.ಕಾರ್ಯದರ್ಶಿ ನಿಝಾರ್ ಸಖಾಫಿ ಮುಡೂರು ನಿರೂಪಣೆಗೈದರು.