ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ ) ಐವತ್ತೊಕ್ಲು ಒಕ್ಕೂಟದ ವತಿಯಿಂದ ಪಂಜ ಪೈಂದೋಡಿ ಶ್ರೀ ಸುಬ್ರಾಯ ಸ್ವಾಮಿ ದೇವಾಲಯದಲ್ಲಿ ಸ್ವಚ್ಛತೆ ಕಾರ್ಯಕ್ರಮ ನಡೆಯಿತು. ದೇವಾಲಯದ ಅಭಿವೃದ್ದಿ ಸಮಿತಿ ಅಧ್ಯಕ್ಷ ಲೋಕೇಶ್ ಬರೆಮೇಲು ಮಾತನಾಡಿ, “ಸ್ವಚ್ಛತೆ ಕಾರ್ಯಕ್ರಮ ಆ. 21ರಂದು ನಡೆಯುವ ನಾಗರ ಪಂಚಮಿ ಕಾರ್ಯಕ್ರಮ ಕ್ಕೆ ಪೂರಕವಾಗಿರುತ್ತದೆ. ನಿಮ್ಮ ಸೇವೆ ಶಾಶ್ವತವಾಗಿ ನಮ್ಮ ದೇವಾಲಯಕ್ಕೆ ಸಿಗಲಿ “ಎಂದು ಹೇಳಿದರು. ತಾಲೂಕು ಜನಜಾಗೃತಿ ವೇದಿಕೆ
ಸದಸ್ಯರಾದ ಮೋನಪ್ಪ ಗೌಡ ಬೊಳ್ಳಾಜೆ ಮಾತನಾಡಿ “ಪೂಜ್ಯ ಖಾವಂದರ ಆಶಯದಂತೆ ನಡೆಯುವ ಈ ನಿಮ್ಮ ಸೇವೆಗೆ ಭಗವಂತನ ಆಶೀರ್ವಾದ ಸದಾ ಇರುತ್ತದೆ”ಎಂದರು.
ಪಂಜ ವಲಯ ಮೇಲ್ವಿಚಾರಕರಾದ ಶ್ರೀಮತಿ ಕಲಾವತಿಯವರು ಮಾತನಾಡಿ “ರಾಜ್ಯಾದ್ಯಂತ ನಡೆಯುವ ಈ ಸೇವೆ ಇಂದು ನಮ್ಮ ದೇವಾಲಯದಲ್ಲಿ ನಡೆಯುತ್ತಿದೆ. ಶ್ರದ್ಧಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮ ಪೂಜ್ಯರ ಕನಸು ಅದನ್ನು ನಾವೆಲ್ಲ ಸೇರಿ ನನಸು ಮಾಡುತ್ತಿದ್ದೇವೆ”ಎಂದರು. ದೇವಾಲಯದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸತೀಶ್ ಬೊಳ್ಳಜೆ ಒಕ್ಕೂಟದ ಅಧ್ಯಕ್ಷೆ ಧನ್ಯ ನೆಕ್ಕಿಲ, ಒಕ್ಕೂಟದ ಪದಾಧಿಕಾರಿಗಳಾದ ಶಶಿಪ್ರಭಾ ಹತ್ಯಡ್ಕ,
ಸುನೀತಾ ಕೃಷ್ಣನಗರ, ದೇವಸ್ಥಾನದ ಆಡಳಿತ ಸಮಿತಿ ಸದಸ್ಯರು ಭಾಗವಹಿಸಿದ್ದರು. ಐವತ್ತೊಕ್ಲು ಒಕ್ಕೂಟದ ಸೇವಾಪ್ರತಿನಿಧಿ ಶ್ರೀಮತಿ ರೋಹಿಣಿ ಆರ್ನೋಜಿ ಸ್ವಾಗತಿಸಿದರು ಮತ್ತು ವಂದಿಸಿದರು. ಸೇವೆ ಮಾಡಿದ ಎಲ್ಲರಿಗೂ ದೇವಾಲಯದ ವತಿಯಿಂದ ಬೆಳಿಗ್ಗೆ ಉಪಹಾರ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆ ಯನ್ನು ಮಾಡಿದ್ದರು.ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಭವಾನಿ ಶಂಕರ ಪಾಲೋಳಿ, ಸದಸ್ಯರು ಉಪಸ್ಥಿತರಿದ್ದರು.