ಉಬರಡ್ಕ ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯೋತ್ಸವ, ಸನ್ಮಾನ

0

ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ನಲ್ಲಿ 76ನೇ ಸ್ವಾತಂತ್ರೋತ್ಸವ ಆಚರಣೆಯು ಆ.15 ರಂದು ನಡೆಯಿತು. ದ್ವಜಾರೋಹಣವನ್ನು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಚಿತ್ರಕುಮಾರಿ ನೆರವೇರಿಸಿದರು.


ನಿವೃತ್ತ ಯೋಧ ದಿವಾಕರ ಶೆಟ್ಟಿಹಿತ್ಲು ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷ ಪ್ರಶಾಂತ್ ಪಾನತ್ತಿಲ, ಸದಸ್ಯರಾದ ಹರೀಶ್ ಉಬರಡ್ಕ, ಶ್ರೀಮತಿ ಪೂರ್ಣಿಮಾ ಸೂಂತೋಡು, ಶ್ರೀಮತಿ ಮಮತಾ ಕುದ್ಪಾಜೆ, ಸಂದೀಪ್, ಶ್ರೀಮತಿ ಭವಾನಿ ಮೂರ್ಜೆ, ಪಿ.ಡಿ.ಓ ವಿದ್ಯಾಧರ್ ಕುಡೆಕಲ್ಲು, ಶ್ರೀಮತಿ ಶೈಲಾ ದಿವಾಕರ್, ಸಂಜೀವಿನಿ ಸಂಘದ ಎಂ.ಬಿ.ಕೆ , ರಾಘವ ರಾವ್, ಹಾಗೂ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.