ಪೂರ್ವಜರ ತ್ಯಾಗ, ಬಲಿದಾನವೇ ಪ್ರೇರಣೆ : ತಹಶೀಲ್ದಾರ್ ಮಂಜುನಾಥ್
ರಾಷ್ಟ್ರೀಯ ಹಬ್ಬಗಳ ದಿನಾಚರಣೆ ಸಮಿತಿ ಸುಳ್ಯ ತಾಲೂಕು ಇದರ ಆಶ್ರಯದಲ್ಲಿ 76 ನೇ ಸ್ವಾತಂತ್ರ್ಯ ದಿನಾಚರಣೆ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆಯಿತು.
ತಹಶೀಲ್ದಾರ್ ಎಂ.ಮಂಜುನಾಥ್ ಧ್ವಜಾರೋಹಣ ಗೈದು, ಧ್ವಜವಂದನೆ ಸ್ವೀಕರಿಸಿ ಪೂರ್ವಜರ ತ್ಯಾಗ ಬಲಿದಾನದಿಂದಾಗಿ ಸ್ವಾತಂತ್ರ್ಯ ದೊರಕಿದೆ. ಅವರ ತ್ಯಾಗ ಬಲಿದಾನ ನಮಗೆ ಪ್ರೇರಣೆಯಾಗಿದೆ ಎಂದು ಹೇಳಿದರು.
ಸಭಾ ಕಾರ್ಯಕ್ರಮ :
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿ ಸಂದೇಶ ಸಾರಿದರು.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಮಾತನಾಡಿ ಸುಳ್ಯದಲ್ಲಿ ಯುದ್ಧ ಸ್ಮಾರಕ ಆಗಬೇಕು. ತಾಲೂಕು ಕಚೇರಿಯ ಮುಂಭಾಗದಲ್ಲಿ ಸ್ಮಾರಕ ಮಾಡೋಣ.ಅದಕ್ಕೆ ನಾವು ಸಹಕಾರ ನೀಡುವುದಾಗಿ ಹೇಳಿದರು.
ನಗರ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ವಿನಯ ಕುಮಾರ್ ಕಂದಡ್ಕ, ಎಂ.ವೆಂಕಪ್ಪ ಗೌಡ ಶುಭ ಹಾರೈಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್, ಸದಸ್ಯರುಗಳಾದ ಸರೋಜಿನಿ ಪೆಲ್ತಡ್ಕ, ಪೂಜಿತಾ ಕೆ.ಯು., ಸುಶೀಲ ಜಿನ್ನಪ್ಪ, ಶಿಲ್ಪಾಸುದೇವ್, ಪ್ರವಿತಾ ಪ್ರಶಾಂತ್, ಶೀಲಾ ಕುರುಂಜಿ, ಶಶಿಕಲಾ ನೀರಬಿದಿರೆ, ನ.ಪಂ. ಮುಖ್ಯಾಧಿಕಾರಿ ಸುಧಾಕರ್, ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ರಮೇಶ್, ಸರ್ಕಲ್ ಇನ್ ಸ್ಪೆಕ್ಟರ್ ನವೀನ್ ಚಂದ್ರ ಜೋಗಿ, ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಮೋಹನ್ ಬೊಮ್ಮೆಟ್ಟಿ, ಉಪಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ತೀರ್ಥರಾಮ ಹೊಸೊಳಿಕೆ ವೇದಿಕೆಯಲ್ಲಿ ಇದ್ದರು.
ನನ್ನ ಮಣ್ಣು – ನನ್ನ ದೇಶ ವಿಷಯದಲ್ಲಿ ನಡೆದ ಭಾಷಣ ಸ್ಪರ್ಧೆಯಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಾದ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸೃಷ್ಟಿ ಎಸ್, ಶಾರದಾ ಹೆಣ್ಣ ಮಕ್ಕಳ ಪ್ರೌಢಶಾಲಾ ವಿದ್ಯಾರ್ಥಿನಿ ಖುಷಿ ರೈ ತಮ್ಮ ಭಾಷಣವನ್ನು ಸಭೆಯಲ್ಲಿ ಮಾಡಿದರು. ಬಳಿಕ ಬಹುಮಾನವನ್ನು ವಿತರಿಸಲಾಯಿತು. ತೃತೀಯ ಸ್ಥಾನ ಪಡೆದ ಪ್ರಣಮ್ಯ ರೈಯವರನ್ನು ಗೌರವಿಸಲಾಯಿತು.
ಸನ್ಮಾನ : ನಿವೃತ್ತ ಯೋಧ ಐವರ್ನಾಡಿನ ಕೊಯಿಲ ನಿವಾಸಿ ವೀರಪ್ಪ ಗೌಡರನ್ನು ಸನ್ಮಾನಿಸಲಾಯಿತು. ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಪ್ರಥಮದರ್ಜೆ ಸಹಾಯಕ ಶಿವಪ್ರಸಾದ್ ಕಡವೆಪಳ್ಳ ಪರಿಚಯ ಮಾಡಿದರು.
ಆಕರ್ಷಕ ಪಥಸಂಚಲನ : ಧ್ವಜಾರೋಹಣ ಬಳಿಕ ಆಕರ್ಷಕ ಪಥ ಸಂಚಲನ ನಡೆಯಿತು. ಪೋಲೀಸ್, ಗೃಹರಕ್ಷಕ, ಎನ್.ಸಿ.ಸಿ., ಸ್ಕೌಟ್ ಗೈಡ್ಸ್, ನಿವೃತ್ತ ಸೈನಿಕರು ಸಹಿತ, ನಗರದ ವಿವಿಧ ವಿದ್ಯಾಸಂಸ್ಥೆ ಗಳ ವಿದ್ಯಾರ್ಥಿಗಳು ಭಾಗವಹಿಸಿದರು. ಸುಳ್ಯ ಎಸ್.ಐ. ಈರಯ್ಯ ದೊಂತೂರು ಪೆರೇಡ್ ನೇತೃತ್ವ ವಹಿಸಿದ್ದರು.
ಶೈಕ್ಷಣಿಕ ಸಾಧಕರಿಗೆ ಸನ್ಮಾನ : 2023 ನೇ ಶೈಕ್ಷಣಿಕ ವರ್ಷದಲ್ಲಿ ಅತ್ಯುತ್ತಮ ಸಾಧನೆಗೈದರು 10 ವಿದ್ಯಾರ್ಥಿಗಳಾದ ತನ್ವಿ, ಮನೀಷ್, ರಶ್ಮಿತಾ, ಶ್ರಾವ್ಯ, ಕೀರ್ತನ್, ಮಹತಿ ಬಿ, ಅಭಿಜ್ಞಾ, ದ್ವಿತಿ, ಸನಿಹಾ ಶೆಟ್ಟಿಯವರನ್ನು ಪುರಸ್ಕರಿಸಲಾಯಿತು.
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಈ. ರಮೇಶ್ ವಂದಿಸಿದರು. ಶಿಕ್ಷಕಿ ಶ್ರೀಮತಿ ಮಮತಾ ಕಾರ್ಯಕ್ರಮ ನಿರೂಪಿಸಿದರು.