ಕನಕಮಜಲು ಗ್ರಾ.ಪಂ.ನಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಕನಕಮಜಲು ಗ್ರಾಮ ಪಂಚಾಯತಿ ವಠಾರದಲ್ಲಿ ಆ.15ರಂದು 76ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀಧರ ಕುತ್ಯಾಳ ಅವರು ಧ್ವಜಾರೋಹಣ ನೆರವೇರಿಸಿ, ಶುಭಹಾರೈಸಿದರು.


ಈ ಸಂದರ್ಭದಲ್ಲಿ ಸೇನೆಯಲ್ಲಿರುವ ವೇಳೆ ಹುತಾತ್ಮರಾದ ದಿ. ಹೊನ್ನಪ್ಪ ಗೌಡ ಕೊರ್ಬಂಡ್ಕ ಅವರ ಸ್ಮರಣಾರ್ಥ ಅವರ ತಾಯಿ ಕಮಲ ಕೊರ್ಬಂಡ್ಕ ಅವರಿಗೆ ಗ್ರಾಮ ಪಂಚಾಯತಿ ವತಿಯಿಂದ ಗ್ರಾ.ಪಂ. ಅಧ್ಯಕ್ಷ ಶ್ರೀಧರ ಕುತ್ಯಾಳ, ಉಪಾಧ್ಯಕ್ಷೆ ಶ್ರೀಮತಿ ದೇವಕಿ ಕುದ್ಕುಳಿ ಅವರು ಸನ್ಮಾನಿಸಿ, ಗೌರವಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಸರಕಾರದ ಯೋಜನೆಯಾದ ನನ್ನ ಮಣ್ಣು ನನ್ನ ದೇಶ ಯೋಜನೆಯ ಶಿಲಾ ಫಲಕ ಅನಾವರಣ, ಪಂಚಪ್ರಾಣ ಶಪಥ, ವಸೂಧಾವಂದನ , ವೀರರಿಗೆ ಗೌರವಾರ್ಪಣೆ, ರಾಷ್ಟ್ರಧ್ವಜ ವಂದನೆ, ಹರ್ ಘರ್ ತಿರಂಗಾ ಕಾರ್ಯಕ್ರಮವನ್ನು ನಡೆಸಲಾಯಿತು. ಗ್ರಾಮ ಪಂಚಾಯತಿ ವ್ಯಾಪ್ತಿಯ ನೆಡಿಲು ಬಳಿ ಗಿಡಗಳನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರೋಜಿನಿ, ಗ್ರಾಮ ಪಂಚಾಯತಿ ಕಾರ್ಯದರ್ಶಿ ರಮೇಶ್ ಟಿ, ನೂತನ ಉಪಾಧ್ಯಕ್ಷ ರವಿಚಂದ್ರ ಕಾಪಿಲ, ಸದಸ್ಯ ಇಬ್ರಾಹಿಂ ಕಾಸಿಂ ಕನಕಮಜಲು, ಗ್ರಾ.ಪಂ. ಮಾಜಿ ಅಧ್ಯಕ್ಷರುಗಳಾದ ವಸಂತ ಗಬ್ಬಲಡ್ಕ, ಗೋಪಾಲಕೃಷ್ಣ ಕುತ್ಯಾಳ, ಕನಕಮಜಲು ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಗೌಡ ಬೊಮ್ಮೆಟ್ಟಿ, ಮಾಜಿ ಉಪಾಧ್ಯಕ್ಷರುಗಳು, ಮಾಜಿ ಸದಸ್ಯರುಗಳು, ಸೇರಿದಂತೆ ಕನಕಮಜಲು ಗ್ರಾಮಸ್ಥರು ಉಪಸ್ಥಿತರಿದ್ದರು.