ಅರಂತೋಡು
ವಿಶ್ವಹಿಂದೂ ಪರಿಷದ್ ಭಜರಂಗದಳ ಹನುಮಾನ್ ಶಾಖೆ ವತಿಯಿಂದ ಅಖಂಡ ಭಾರತ ಸಂಕಲ್ಪ ಹಾಗೂ ಪಂಜಿನ ಮೆರವಣಿಗೆಯು ಆ. 13 ರಂದು ಅರಂತೋಡಿನಲ್ಲಿ ನಡೆಯಿತು.
ಪಂಜಿನ ಮೆರವಣಿಗೆಯು ಕೋಡಂಕೇರಿ ಕೊರಗಜ್ಜನ ದೇವಸ್ಥಾನದ ದ್ವಾರದಿಂದ ಹೊರಟು ದುರ್ಗಾಮತಾ ಭಜನಾ ಮಂದಿರದ ಬಳಿ ಸಮಾಪನಗೊಂಡಿತು. ಸಭಾಕಾರ್ಯಕ್ರಮವು ಅರಂತೋಡು ತೊಡಿಕಾನ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಯಿತು.
ಶ್ರೀಮತಿ ನಳಿನಾಕ್ಷಿ ವೆಂಕಟ್ರಮಣ ಆಚಾರ್ಯ ಕಲ್ಮಡ್ಕ ರವರು ಅಖಂಡ ಭಾರತದ ನಿರ್ಮಾಣಕ್ಕೆ ಪಣ ತೊಡುವಂತೆ ಯುವಕರಿಗೆ ಕರೆ ನೀಡಿದರು.
ವೇದಿಕೆಯಲ್ಲಿ ವಿಶ್ವಹಿಂದೂ ಪರಿಷತ್ ಸುಳ್ಯ ಪ್ರಖಂಡದ ಅಧ್ಯಕ್ಷ ಸೋಮಶೇಖರ್ ಪೈಕ, ಆರಂತೋಡು ಹನುಮಾನ್ ಶಾಖೆಯ ಅಧ್ಯಕ್ಷ ವಿನೋದ್ ಕುಮಾರ್ ಉಳುವಾರು ಉಪಸ್ಥಿತರಿದ್ದರು.
ನಿವೃತ್ತ ಸೈನಿಕ ಮಾಧವ ಮೇಲಡ್ತಲೆ ಯವರು ಅಧ್ಯಕ್ಷತೆ ವಹಿಸಿದ್ದರು.
ಸಂಘಟನೆಯ ಕಾರ್ಯಕರ್ತರು ಹಾಗೂ ದುರ್ಗಾ ವಾಹಿನಿಯ ಮಹಿಳೆಯರು ಉಪಸ್ಥಿತರಿದ್ದರು.
ದುರ್ಗಾ ವಾಹಿನಿಯ ಮಹಿಳೆಯರು
ವಂದೇ ಮಾತರಂ ಗೀತೆ ಯನ್ನು ಹಾಡಿದರು.
ಕುಸುಮಾಧರ ಅಡ್ಕಬಳೆ ಸ್ವಾಗತಿಸಿದರು. ರಾಜೇಂದ್ರ ಮರ್ಕಂಜ ವಂದಿಸಿದರು. ಜೀವನ್ ಮಾಸ್ತರ್ ಅರಂತೋಡು ಕಾರ್ಯಕ್ರಮ ನಿರೂಪಿಸಿದರು.