ಬಾಳಿಲ ವಿದ್ಯಾ ಬೋಧಿನೀ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.
ವಿದ್ಯಾಬೋಧಿನೀ ಸ್ಕೌಟ್ಸ್ ಗೈಡ್ಸ್ ಬ್ಯಾಂಡ್ ವಾದನದ ಮೂಲಕ ಅತಿಥಿ ಅಭ್ಯಾಗತರನ್ನು ಬರಮಾಡಿಕೊಳ್ಳಲಾಯಿತು.
ಧ್ವಜಾರೋಹಣವನ್ನುವಿದ್ಯಾಬೋಧಿನೀ ಎಜ್ಯುಕೇಶನಲ್ ಸೊಸೈಟಿ (ರಿ) ಬಾಳಿಲ ಇದರ ಅಧ್ಯಕ್ಷರಾದ ರಾಧಾಕೃಷ್ಣರಾವ್ ಯು ನೆರವೇರಿಸಿ ಧ್ವಜ ಸಂದೇಶ ನೀಡಿದರು. ವಾಸುದೇವ.ಕೆ ಬದಿಯಾರು ಕಾಣಿಯೂರು, ನಿವೃತ್ತ ಯೋಧರು ಮುಖ್ಯ ಅಭ್ಯಾಗತರಾಗಿ ಆಗಮಿಸಿ ” ವಿದ್ಯೆ ಎನ್ನುವುದು ದೃಢ ಸಾಧಕನ ಸ್ವತ್ತು .ಪ್ರಯತ್ನಗಳಿಂದ ಉತ್ತಮ ಫಲಿತಾಂಶ ಸಾಧ್ಯ. ಹೆಚ್ಚು ಹೆಚ್ಚು ದೇಶ ಸೇವೆಗೆ ಸೇರ್ಪಡೆಗೊಳ್ಳಿ ಎಂದು ಪ್ರೋತ್ಸಾಹದಾಯಕ ಮಾತುಗಳನ್ನು ಹೇಳಿದರು.
ಇದೇ ಸಂದರ್ಭದಲ್ಲಿ ವಾಸುದೇವ.ಕೆ ನಿವೃತ್ತ ಯೋಧರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಭಾಷಣ ಮತ್ತು ದೇಶಭಕ್ತಿಗೀತೆ ಕಾರ್ಯಕ್ರಮಗಳು ನಡೆದವು.
ಸ್ವಾತಂತ್ರೋತ್ಸವ ಪ್ರಯುಕ್ತ ನಡೆದ ಸಾಹಿತ್ಯಿಕ ಸ್ಪರ್ಧೆಗಳ ವಿಜೇತರ ಪಟ್ಟಿಯನ್ನು ಅನನ್ಯ ಬಿ (10), ಕ್ರೀಡಾ ಸ್ಪರ್ಧೆಗಳ ವಿಜೇತರ ಪಟ್ಟಿಯನ್ನು ಅನನ್ಯ ಎ೦ , ರಕ್ಷಾ ಎನ್ ಸಿ ,ಕಾರ್ತಿಕ್ ಎನ್’ ಪ್ರದೀಪ್ ಕೆ (10) ವಾಚಿಸಿದರು. ಮುಖ್ಯ ಶಿಕ್ಷಕರಾದ ಯಶೋಧರ ಎನ್ ಸ್ವಾಗತಿಸಿ ಪ್ರಸ್ತಾವನೆಗೈದರು ವಿದ್ಯಾರ್ಥಿನಿಯರಾದ ಕ್ಷಮಾ ಮತ್ತು ಜಸ್ವಿತಾ (9) ನಿರ್ವಹಿಸಿದ ಕಾರ್ಯಕ್ರಮವನ್ನು ಸಹ ಶಿಕ್ಷಕಿ ಕವಿತಾ ಕೆ.ಎನ್ ವ೦ದಿಸಿದರು.