ನಂದಿನಿ ಸಿಹಿ ಉತ್ಸವಕ್ಕೆ ಸುಳ್ಯ ರೋಟರಿ ನಂದಿನಿ ಮಿಲ್ಕ್ ಪಾರ್ಲರ್ ನಲ್ಲಿ ಚಾಲನೆ

0

ದಕ್ಷಿಣ ಕನ್ನಡ ಹಾಲು ಉತ್ಪಾದಕ ಒಕ್ಕೂಟದ ಇದರ ಅಧೀನದಲ್ಲಿರುವ
ಉತ್ಪನ್ನಗಳ ಮಾರಾಟ ಮಳಿಗೆಯಲ್ಲಿ ಅ.15 ರಿಂದ ನಂದಿನಿ ಕೆಲವು ಉತ್ಪನ್ನಗಳಿಗೆ ರಿಯಾಯಿತಿ ದರದಲ್ಲಿ ಮಾರಾಟ ಕಾರ್ಯ ನಡೆಯುತ್ತಿದೆ.
ಸುಳ್ಯ ರೋಟರಿ ಶಾಲೆ ಬಳಿ ಇರುವ ರೋಟರಿ ನಂದಿನಿ ಮಿಲ್ಕ್ ಪಾರ್ಲರ್ ನಲ್ಲಿ ಸಿಹಿ ಉತ್ಸವಕ್ಕೆ ಚಾಲನೆ ನೀಡಲಾಯಿತು.


ಎಂ ಸಿ ಸಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಗಿರೀಶ್ ಅಡ್ಪಂಗಾಯ,ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಜಿಲ್ಲಾ ಉಪಾಧ್ಯಕ್ಷ ಶರೀಫ್, ಇಸಾಕ್ ಬೆನಕ,ಸಂತೋಷ್ ಕುಮಾರ್ ರೈ ಕಾನತ್ತಿಲ ಮೊದಲಾದವರು ಉಪಸ್ಥಿತರಿದ್ದರು.
ನಂದಿನಿ ಪಾಲುದಾರ ರಜಾಕ್ ಸರ್ವರನ್ನೂ ಸ್ವಾಗತಿಸಿ ನಂದಿನಿ‌ ಸಿಹಿ ಉತ್ಸವದ ಬಗ್ಗೆ ಮಾಹಿತಿ ನೀಡಿದರು.