ನೆಲ್ಲೂರು ಕೆಮ್ರಾಜೆ : ವಿಜಯ ಗ್ರಾಮಾಭಿವೃದ್ಧಿ ಸಮಿತಿ ರಚನೆಯ ಬಗ್ಗೆ ಪೂರ್ವ ಭಾವಿ ಸಭೆ

0

ನೆಲ್ಲೂರು ಕೆಮ್ರಾಜೆ-ಮರ್ಕಂಜ ಗ್ರಾಮದಲ್ಲಿ ವಿಜಯ ಗ್ರಾಮಾಭಿವೃದ್ಧಿ ಸಮಿತಿ ರಚಿಸುವ ಬಗ್ಗೆ ಪೂರ್ವ ಭಾವಿ ಸಭೆಯು ಆ.16ರಂದು ಪ್ರಾ.ಕೃ.ಪ.ಸ.ಸಂಘದಲ್ಲಿ ನಡೆಯಿತು.‌


ಸಮಿತಿಯ ಉದ್ದೇಶ ಮತ್ತು ಕಾರ್ಯವಿಧಾನ ದ ಬಗ್ಗೆ ವಿ.ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಚಿನ್ ಹೆಗ್ಡೆ ಮಾಹಿತಿ ನೀಡಿದರು.


ಈ ಸಂದರ್ಭದಲ್ಲಿ ವಿಜಯ ಗ್ರಾಮೀಣಾಭಿವೃದ್ಧಿ ಜಾಲ್ಸೂರು ಸಮಿತಿಯ ಅಧ್ಯಕ್ಷರಾದ ಯಶ್ವಿತ್ ಕಾಳಮ್ಮನೆ, ಕಾರ್ಯದರ್ಶಿ ತಿರುಮಲೇಶ್ವರಿ ಅರ್ಬಡ್ಕ, ಸದಸ್ಯರಾದ ಸುಮತಿ ಹುಲಿಮನೆ, ನೆಲ್ಲೂರು ಕೆಮ್ರಾಜೆ‌ ಗ್ರಾ.ಪಂ. ಅಧ್ಯಕ್ಷ ಧನಂಜಯ ಕುಮಾರ್, ಉಪಾಧ್ಯಕ್ಷೆ ವಂದನಾ ಹೊಸ್ತೋಟ, ಸದಸ್ಯರಾದ ವೇಣುಗೋಪಾಲ ಪುನ್ಕುಟ್ಟಿ, ರಾಮಚಂದ್ರ ಪ್ರಭು, ಮರ್ಕಂಜ ಗ್ರಾ.ಪಂ. ಸದಸ್ಯರಾದ ಗೋವಿಂದ ಅಳವುಪಾರೆ, ಬೊಳ್ಳಾಜೆ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ಯಾಮಲಾ ಎ.ವಿ., ಸೇವಾಜೆ ಶಾಲಾ ಶಿಕ್ಷಕಿ ಅಶ್ವಿನಿ ಮುಂಡೋಡಿ, ನಿವೃತ್ತ ಅಂಚೆ‌ ಪಾಲಕ ಬಾಲು ನಾಯ್ಕ‌ ಕೊರತ್ತೋಡಿ, ನೆಲ್ಲೂರು ‌ಕೆಮ್ರಾಜೆ‌ ಸೊಸೈಟಿ ಸಿಬ್ಬಂದಿಗಳಾದ ಸುಭಾಶ್ಚಂದ್ರ ಕೆರೆಮೂಲೆ, ಜೀವನ್ ಪುನ್ಕುಟ್ಟಿ, ನಾಗ ಮತ್ತುಗುಳಿಗ ಸಾನಿಧ್ಯ ಇಲ್ಲಿಯ ಜನಾರ್ಧನ ಮುಂಡೋಡಿ, ಜ್ಞಾನದೀಪ‌ ವಿದ್ಯಾಸಂಸ್ಥೆಯ‌ ಮುಖ್ಯೋಪಾಧ್ಯಾಯರಾದ ಗದಾಧರ ಬಾಳುಗೋಡು, ಓಂಪ್ರಸಾದ್ ಕಜೆ, ಶೌರ್ಯ ವಿಪತ್ತು ಘಟಕದ ದೊಡ್ಡತೋಟ ವಲಯ ಸಂಯೋಜಕರಾದ ವೆಂಕಟ್ರಮಣ ಡಿ.ಜೆ., ಹಾಗೂ ಟೈಲರ್ ಉದಯರವಿ ಉಪಸ್ಥಿತರಿದ್ದರು. ದಯಾನಂದ ಕೊರತ್ತೋಡಿ ಸ್ವಾಗತಿಸಿ‌ ವಂದಿಸಿದರು‌.