ಅರಂತೋಡು ಗ್ರಾ. ಪಂ ನೂತನ ಅಧ್ಯಕ್ಷ ಉಪಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ

0


ಅರಂತೋಡು ಗ್ರಾ. ಪಂ ನ ೨ನೇ ಅವಧಿಯ ಅಧ್ಯಕ್ಷರಾಗಿ ಆಯ್ಕೆಯಾದ ಕೇಶವ ಅಡ್ತಲೆ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಭವಾನಿ ಚಿಟ್ಟನ್ನೂರು ಅಧಿಕಾರ ಸ್ವೀಕರಿಸಿದರು. ಹಿಂದಿನ ಅವಧಿಯ ಅಧ್ಯಕ್ಷರಾಗಿದ್ದ ಹರಿಣಿ ದೇರಾಜೆಯವರು, ಅರಂತೋಡು -ತೋಡಿಕಾನ ಪ್ರ. ಕೃ. ಪ. ಸ. ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ತೋಡಿಕಾನ ದೇವಸ್ಥಾನದ ಆಡಳಿತಮಂಡಳಿ ಅಧ್ಯಕ್ಷ ಕಿಶೋರ್ ಉಳುವಾರು, ಜತ್ತಪ್ಪ ಮಾಸ್ತರ್ ಅಳಿಕೆ, ಪುರುಷೋತ್ತಮ ಕಿರ್ಲಾಯ ಸಭೆಯನ್ನುದ್ದೇಶಿಸಿ ಮಾತನಾಡಿದರು. ಗ್ರಾ. ಪಂ ಪಿ. ಡಿ. ಒ ಜಯಪ್ರಕಾಶ್ ಎಲ್ಲರನ್ನು ಸ್ವಾಗತಿಸಿ, ಗ್ರಾ. ಪಂ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಶುಭಹಾರೈಸಿ ವಂದಿಸಿದರು.