ಮಂಡೆಕೋಲು ಗ್ರಾಮದ ಮುರೂರು ದ್ವಾರಕಾ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಕೃಷ್ಣ ಭಜನಾ ಮಂದಿರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ರೂಪಾಯಿ ಒಂದೂವರೆ ಲಕ್ಷ ಧನಸಹಾಯ ಮಂಜೂರಾಗಿದ್ದು ಇದರ ಮಂಜೂರಾತಿ ಪತ್ರವನ್ನು ತಾಲೂಕು ಯೋಜನಾಧಿಕಾರಿಗಳಾದ ಮಾಧವ ಗೌಡರು ವಿತರಿಸಿದರು.
ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕ ಶುಭಹಾರೈಸಿದರು. ಮಂದಿರದ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಜಿತ್ ಅನುದಾನ ಪತ್ರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಂದಿರದ ಪ್ರತಿಷ್ಠಾ ಸಮಿತಿ ಅಧ್ಯಕ್ಷರಾದ ಡಿ.ವಿ ಸುರೇಶ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಕುಶಾಲಪ್ಪ ಗೌಡ, ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಸತ್ಯನಾರಾಯಣ ಶರ್ಮ, ಸುದರ್ಶನ್ ಮುರೂರು, ವಿಶ್ವನಾಥ ಕೊಳಂಬೆ, ಮಧುಸೂಧನ ಮುರೂರು, ವಸಂತ, ರಾಜೀವ ಮುರೂರು, ಸಂದೇಶ್ ಮುರೂರು, ಯೋಜನೆಯ ವಲಯ ಮೇಲ್ವಿಚಾರಕರಾದ ಕಾಂತಿಕಾಮಣಿ, ಸೇವಾಪ್ರತಿನಿಧಿ ವೇದಾವತಿ ಮೊದಲಾದವರು ಉಪಸ್ಥಿತರಿದ್ದರು.
ಮೇಲ್ವಿಚಾರಕಿ ಕಾಂತಿಕಾಮಣಿ ಸ್ವಾಗತಿಸಿ, ವೇದಾವತಿ ಧನ್ಯವಾದ ಸಮರ್ಪಿಸಿದರು.