
ಅಜ್ಜಾವರ ಗ್ರಾಮದ ಅಡ್ಪಂಗಾಯ ಅಂಗನವಾಡಿಯಲ್ಲಿ ಮಕ್ಕಳ ಬೀಳ್ಕೊಡುಗೆ ಕಾರ್ಯಕ್ರಮ ಎ.3ರಂದು ನಡೆಯಿತು.
ಅಂಗನವಾಡಿ ಪುಟಾಣಿಗಳ ಪ್ರಾಥ೯ನೆ ಯೊಂದಿಗೆ ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀಮತಿ ಲಾವಣ್ಯ ಅಡ್ಪಂಗಾಯ ದೀಪ ಬೆಳಗಿಸಿ ಉದ್ಘಾಟಿಸಿದರು.
ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಲೀಲಾ ಮನಮೋಹನ್ ಶುಭಹಾರೈಸಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ರಾಹುಲ್ ಅಡ್ಪಂಗಾಯ, ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷರಾದ ಧಮಾ೯ವತಿ, ಸಮಿತಿ ಸದಸ್ಯರು ಹಾಜರಿದ್ದರು. ಮಕ್ಕಳಿಗೆ ಹಾಗೂ ಪೋಷಕರಿಗೆ ಮತ್ತು ಸ್ರೀಶಕ್ತಿ ಸದಸ್ಯರಿಗೆ ಕ್ರೀಡಾಕೂಟ ಏಪ೯ಡಿಸಿ ಬಹುಮಾನ ವಿತರಣೆ ಮಾಡಲಾಯಿತು. ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಭಾಗೀರಥಿ ಸ್ವಾಗತಿಸಿ, ವಂದಿಸಿದರು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ದ ಬಳಿಕ ಕಾರ್ಯಕ್ರಮ ಕೊನೆಗೊಂಡಿತು