ಯೋಗಪಟು ಸೋನಾ ಅಡ್ಕಾರುರವಳಿಗೆ ಒಂದೇ ದಿನ ಅವಳಿ ಪ್ರಶಸ್ತಿ

0

ಕರುನಾಡ ನಿಧಿ ಮತ್ತು ಕವಿ ಚಕ್ರವರ್ತಿ ಪಂಪ ಸದ್ಭಾವನ ರಾಜ್ಯ ಪ್ರಶಸ್ತಿ ಬೆಂಗಳೂರಿನಲ್ಲಿ ಪ್ರದಾನ

ಎಪ್ರಿಲ್ 5 ರಂದು ರವೀಂದ್ರ ಕಲಾಕ್ಷೇತ್ರ ಕನ್ನಡ ಭವನ ಬೆಂಗಳೂರು ಇಲ್ಲಿ ನಡೆದ ಕರುನಾಡ ನಿಧಿ ಕನ್ನಡ ವಾರಪತ್ರಿಕೆಯ ವಾರ್ಷಿಕೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ವಿಶ್ವ ಮಾನವ ಹಕ್ಕುಗಳ ಆಯೋಗ ಹಾಗೂ ಭ್ರಷ್ಟಾಚಾರ ನಿಗ್ರಹ ದಳದ ರಾಷ್ಟ್ರೀಯ ಅಧ್ಯಕ್ಷ ಡಾ. ಪ್ರವೀಣ್ ಆರ್ ಹಿರೇಮಠ ಮತ್ತು ಹಲವು ಗಣ್ಯರು ಸೋನಾ ಅಡ್ಕಾರು ರವಳ ಬಹುಮುಖ ಪ್ರತಿಭೆಯನ್ನು ಗುರುತಿಸಿ ಕರುನಾಡ ನೀಡಿ ಪ್ರಶಸ್ತಿ ನೀಡಿ ಗೌರವಿಸಿದರು.

ಅದೇ ದಿನ ಸಂಜೆ ಸಂಸ ಬಯಲು ರಂಗ ಮಂದಿರ ಬೆಂಗಳೂರು ಇಲ್ಲಿ ನಡೆದ ವಂದೇ ಮಾತರಂ ಲಲಿತ ಕಲಾ ಅಕಾಡೆಮಿ ರಂಗ ಸಂಭ್ರಮ 2025 ಈ ಕಾರ್ಯಕ್ರಮದಲ್ಲಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್ ಸಂತೋಷ್ ಹೆಗ್ಡೆ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಎಂ.ಮಹೇಶ್ ಜೋಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ್, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ ನಟರಾಜ ಮೂರ್ತಿ ಹಾಗೂ ಹಲವಾರು ಗಣ್ಯರು ಸೇರಿ “ಕವಿ ಚಕ್ರವರ್ತಿ ಪಂಪ ಸದ್ಭಾವನಾ ರಾಜ್ಯ ಪ್ರಶಸ್ತಿ” ನೀಡಿ ಗೌರವಿಸಿದ್ದಾರೆ.

ಈಕೆ ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆ ಸುಳ್ಯ ಇಲ್ಲಿ ಆರನೇ ತರಗತಿಯಲ್ಲಿ ಓದುತ್ತಿದ್ದು, ಜಾಲ್ಸುರು ಗ್ರಾಮದ ಶರತ್ ಅಡ್ಕಾರು ಹಾಗೂ ಶೋಭಾ ಶರತ್ ಇವರ ಸುಪುತ್ರಿ.