ದೇವಚಳ್ಳ : ಆಟಿ ಉತ್ಸವ

0

ಶ್ರೀ ವಿಷ್ಣು ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ, ದೇವಚಳ್ಳ ಇದರ ವತಿಯಿಂದ ಆಟಿ ಉತ್ಸವ ಕಾರ್ಯಕ್ರಮ ಆ.13ರಂದು ನಡೆಯಿತು. ಕಾರ್ಯಕ್ರಮ ವನ್ನು ತಾಲೂಕು ಎನ್.ಆರ್‌ಎಲ್.ಎಂ. ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ವೇತ ರವರು ಉದ್ಘಾಟಿಸಿದರು.

ಬಳಿಕ ಒಕ್ಕೂಟ ದ ಸದಸ್ಯರಿಗೆ ಚೆನ್ನಮಣೆ, ಬಾಲ್ ಪಾಸಿಂಗ್, ಲಕ್ಕಿ ಗೇಮ್, ಚೀಟಿ ಎತ್ತಿ ಅಭಿನಯ ಮೇಣದ ಬತ್ತಿ ಉರಿಸುವ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ನಂತರ ಒಕ್ಕೂಟ ದ ಸದಸ್ಯರು ಆಟಿ ಯ ವಿವಿಧ ತಿಂಡಿಗಳನ್ನು ಮಾಡಿ ತಂದಿದ್ದರು. ಬಳಿಕ ಸಮರೋಪ ಸಮಾರಂಭ ನಡೆಯಿತು.

ಈ ಸಂದರ್ಭದಲ್ಲಿ ಎಂ.ಬಿ.ಕೆ. ಭಾರತಿ ಪಿ. ಡಿ., ಎಲ್.ಸಿ.ಆರ್.ಪಿ. ಪ್ರೇಮ ಮತ್ತು ಜ್ಯೋತಿ, ಕೃಷಿ ಸಖಿ ಸವಿತಾ ಕಾಯರ, ಪಶು ಸಖಿ ಭಾರತಿ, ಲೇಖ ಉದ್ಯೋಗ ಸಖಿ ತಾಲೂಕು ಒಕ್ಕೂಟದ ಅಧ್ಯಕ್ಷರು ಪ್ರಶಿತ, ಕಾರ್ಯದರ್ಶಿ ನೂತನ ಅಧ್ಯಕ್ಷರು ಶೋಭಿತ, ಕಾರ್ಯದರ್ಶಿ ವೀಣಾ ಹಾಗೂ ಸದಸ್ಯರು ಪಾಲ್ಗೊಂಡಿದ್ದರು.