ಅರಂಬೂರು ಸೇತುವೆ ಬಳಿ ಆಕಸ್ಮಿಕ ಬೆಂಕಿ ತಗುಲಿ ಮರ ನಾಶ

0

ಅರಂಬೂರು ಸೇತುವೆಯ ಬಳಿ ಒಣಗಿದ ಮರವೊಂದಕ್ಕೆ ನಿನ್ನೆ ತಡರಾತ್ರಿ ಆಕಸ್ಮಿಕ ಬೆಂಕಿ ತಗುಲಿ ಮರ ಸುಟ್ಟು ಹೋಗಿರುವ ಘಟನೆ ವರದಿಯಾಗಿದೆ.

ಸೇತುವೆಯ ಪಕ್ಕದಲ್ಲಿ ಜಾನು ಎಂಬವರಿಗೆ ಸೇರಿದ ಜಾಗದಲ್ಲಿ ಒಣಗಿದ ಮರವೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಉರಿದು ಹೋಗಿದೆ.
ಇಲ್ಲಿಗೆತೂಗುಸೇತುವೆ ವೀಕ್ಷಣೆಗೆ ಬರುವ ಪ್ರವಾಸಿಗರು ಅದೇ ಜಾಗದಲ್ಲಿ ಕುಳಿತು ಪಾರ್ಟಿ ಮಾಡಿ ಸಿಗರೆಟ್ ಸೇದಿ ಬಿಸಾಡಿ ಹೋಗಿರಬೇಕು.

ಇದರಿಂದಾಗಿ ಮರಕ್ಕೆ ಬೆಂಕಿತಗುಲಿರಬಹುದೆಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ.
ಬೆಂಕಿ ತಗುಲಿರುವ ಬಗ್ಗೆ ಸುಳ್ಯ ಅಗ್ನಿಶಾಮಕ ದಳದವರಿಗೆ ಸ್ಥಳೀಯರು ವಿಷಯ ತಿಳಿಸಿದರು. ರಾತ್ರಿ ವೇಳೆಯಲ್ಲಿ ಆಗಮಿಸಿದ ಅಗ್ನಿಶಾಮಕ ದಳದವರು ಬೆಂಕಿ ನಂದಿಸಿರುವುದಾಗಿ ತಿಳಿದು ಬಂದಿದೆ.