ಸುಳ್ಯದ ಹಿರಿಯ ಉದ್ಯಮಿ ಹಾಗೂ ಸುಳ್ಯ ಮಂಡಲ ಪಂಚಾಯತ್ ಪ್ರಧಾನರಾಗಿದ್ದ ದಿ. ಎಂ.ಬಾಲಕೃಷ್ಣ ಗೌಡರ ಧರ್ಮಪತ್ನಿ ಶ್ರೀಮತಿ ಎಂ.ಬಿ.ದೇವಕಿಯವರು ಇದೀಗ ಕೊನೆಯುಸಿರೆಳೆದಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು. ಜ್ಯೋತಿ ಆಸ್ಪತ್ರೆಯಿಂದ ಅವರ ಪಾರ್ಥೀವ ಶರೀರವನ್ನು ಮನೆಗೆ ಕೊಂಡೊಯ್ಯಲಾಗುತ್ತಿದೆ.
ಮೃತರು ಪುತ್ರರಾದ ಎಂ.ಬಿ. ಜಯರಾಮ, ಎಂ.ಬಿ.ಪ್ರಭಾಕರ, ಎಂ.ಬಿ.ಸದಾಶಿವ, ಪುತ್ರಿ ಸವಿತಾ ಹಾಗೂ ಬಂಧುಗಳನ್ನು ಅಗಲಿದ್ದಾರೆ.