ಸೂಕ್ತ ಚಿಕಿತ್ಸೆ ನೀಡಿ ಸಂಬಂಧಿಕರ ಮನೆಗೆ ತಲುಪಿಸಿದ ಗುತ್ತಿಗಾರು ಅಮರ ಆಂಬುಲೆನ್ಸ್
ಮಾನವೀಯತೆ ಮೆರೆದ ವೈದ್ಯರು ಮತ್ತು ಸ್ಥಳೀಯರು
ರಸ್ತೆ ಬದಿಯಲ್ಲಿ ಆಕಸ್ಮಿಕವಾಗಿ ಬಿದ್ದಿದ್ದ ವೃದ್ಧರೊಬ್ಬರನ್ನು ಸೂಕ್ತ ಚಿಕಿತ್ಸೆ ನೀಡಿ ಗುತ್ತಿಗಾರು ಅಮರ ಆಂಬುಲೆನ್ಸ್‌ನವರು ಸಂಬಂಧಿಕರ ಮನೆಗೆ ತಲುಪಿಸಿದ ಹಾಗೂ ವೈದ್ಯರು ಮತ್ತು ಸ್ಥಳೀಯವರು ಮಾನವೀಯತೆ ಮೆರೆದ ಘಟನೆ ವರದಿಯಾಗಿದೆ.
ಗುತ್ತಿಗಾರು ಸಮೀಪದ ಹಾಲೆಮಜಲು ಎಂಬಲ್ಲಿ ಆ.೨೧ ರ ಬೆಳಗ್ಗೆ ವೃದ್ದ ರೊಬ್ಬರು ಆಕಸ್ಮಿಕವಾಗಿ ಬಿದ್ದಿದ್ದರು. ಆ ದಾರಿಯಲ್ಲಿ ಬಂದ ವಿನ್ಯಾಸ್ ಕೊಚ್ಚಿ ಅವರು ಗುತ್ತಿಗಾರು ಅಮರ ಆಂಬುಲೆನ್ಸ್ ಸೇವೆಗೆ ತಿಳಿಸಿದ್ದಾರೆ. ಬಳಿಕ ಅವರನ್ನು ಗುತ್ತಿಗಾರಿನ ಡಾ. ಕಾಮತ್ ಅವರಲ್ಲಿ ಪ್ರಥಮ ಚಿಕಿತ್ಸೆ ನೀಡಿ ಸುಳ್ಯದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಚಿಕಿತ್ಸೆ ಕೊಡಿಸಿದ ನಂತರ ಅದೇ ಸ್ವತಃ ಆಂಬುಲೆನ್ಸ್ ಮೂಲಕವೇ ಅವರ ಸಂಬಂಧಿಗಳ ಮನೆಯಾದ ದುಗಲಡ್ಕದ ಕೂಟೆಲ್ ಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ವೇಳೆ ಚೇತರಿಕೆಗೊಂಡ ಗಾಯಾಳು ಆಂಬುಲೆನ್ಸ್ ಸೇವೆಗೆ ಸಹಾಯಧನ ನೀಡಿ ಮಾದರಿಯಾದರು. ಗುತ್ತಿಗಾರು ಗ್ರಾ.ಪಂ ಸದಸ್ಯರಾದ ಜಗದೀಶ್ ಬಾಕಿಲ, ಮಾಧವ ಎರ್ದಡ್ಕ, ರಾಜೇಶ್ ಉತ್ರಂಬೆ, ರಾಜೇಶ್ ಕುಕ್ಕುಜೆ, ಗಿರೀಶ್ ಕಾಯರ್ ಮೊಗೇರ್, ತೇಜಾವತಿ ಮತ್ತಿತರರು ಸಹಕಾರ ನೀಡಿದ್ದಾರೆ. ಚಂದ್ರಶೇಖರ ಕಡೋಡಿ ಮತ್ತು ವಿನಯ್ ಮಾಡಬಾಕಿಲು ಆಸ್ಪತ್ರೆಗೆ ಮತ್ತು ಮನೆಗೆ ತಲುಪಿಸುವಲ್ಲಿ ಯಶಸ್ವಿಯಾದರು.