ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಜರಗುವ ಶ್ರೀ ಗಣೇಶೋತ್ಸವದ ರಜತ ಸಂಭ್ರಮ ಸೆ.19 ರಿಂದ ಸೆ.21.ರ ತನಕ ವಿವಿಧ ವೈಧಿಕ,ಧಾರ್ಮಿಕ, ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗಲಿದೆ.
ಇದರ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ ಆ.24 ರಂದು ಪಂಜ ಶ್ರೀ ಶಾರದಾಂಬಾ ಭಜನಾ ಮಂದಿರದ ಸಭಾಭವನದಲ್ಲಿ ನಡೆಯಿತು. ಆರಾಧನಾ ಸಮಿತಿಯ ಗೌರವಾಧ್ಯಕ್ಷ ಮಾಧವ ಗೌಡ ಜಾಕೆ ಆಮಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಿ ಮಾತನಾಡಿ “ಗಣೇಶೋತ್ಸವದ ರಜತ ಸಂಭ್ರಮದಲ್ಲಿ ಎಲ್ಲರೂ ಪಾಲ್ಗೊಂಡು
ಒಂದು ಮಾದರಿ ಕಾರ್ಯಕ್ರಮವಾಗಿ
ಹೊಸ ಚರಿತ್ರೆ ಸೃಷ್ಟಿಸುವಂತೆ ಮಾಡುವ”.ಎಂದು ಹೇಳಿದರು.
ಸಭಾಧ್ಯಕ್ಷತೆಯನ್ನು ಉತ್ಸವ ಸಮಿತಿಯ ಅಧ್ಯಕ್ಷ ಸವಿತಾರ ಮುಡೂರು ವಹಿಸಿ ಮಾತನಾಡಿ “ಬೆಳ್ಳಿ ಹಬ್ಬದ ಗಣೇಶೋತ್ಸವವು ಪ್ರತೀ ಮನೆಯವರು ಪಾಲ್ಗೊಂಡು.
ಎಲ್ಲರೂ ಶ್ರೀ ದೇವರ ಕಾರ್ಯದಲ್ಲಿ ತೊಡಗಿಸಿ ಕೊಳ್ಳ ಬೇಕು.
ಮುಂದೆ ಅದು ಎಲ್ಲರ ಮನದಲ್ಲಿ ಅಚ್ಚಳಿಯದೆ ಉಳಿಯುವ ಹಾಗಾಗ ಬೇಕು”. ಎಂದು ಹೇಳಿದರು.
ಆರಾಧನ ಸಮಿತಿಯ ಅಧ್ಯಕ್ಷ ಚಿನ್ನಪ್ಪ ಸಂಕಡ್ಕ, ಉತ್ಸವ ಸಮಿತಿಯ ಪೂರ್ವಾಧ್ಯಕ್ಷ ಶ್ರೇಯಂಸ್ ಕುಮಾರ್ ಶೆಟ್ಟಿಮೂಲೆ ಮಾತನಾಡಿದರು.
ಆರ್ಥಿಕ ಸಮಿತಿ ಸಂಚಾಲಕ ಪುರುಷೋತ್ತಮ ದಂಬೆಕೋಡಿ, ಕುಶಾಲಪ್ಪ ಗೌಡ ದೊಡ್ಡಮನೆ,ಉತ್ಸವ ಸಮಿತಿಯ ಕಾರ್ಯದರ್ಶಿ ಪವನ್ ಪಲ್ಲತ್ತಡ್ಕ, ಕೋಶಾಧ್ಯಕ್ಷ ಸುಬ್ಬಪ್ಪ ಕಲ್ಲುಗುಂಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಯಶಸ್ಸಿಗಾಗಿ ಸಲಹೆ, ಸೂಚನೆಗಳು ಸಭೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸವಿತಾರ ಮುಡೂರು ಸ್ವಾಗತಿಸಿದರು.
ಪವನ್ ಪಲ್ಲತ್ತಡ್ಕ ವಂದಿಸಿದರು. ವಿವಿಧ ಸಮಿತಿಗಳ ಸಂಚಾಲಕರು, ಸದಸ್ಯರು, ಆರಾಧನಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.