ಸಂಪಾಜೆ ಗ್ರಾ.ಪಂ.ಗೆ ಇನ್ಚಾರ್ಜ್ ಪಿ.ಡಿ.ಒ. ಆಗಿ ಜಯಪ್ರಕಾಶ್

0

ಅರಂತೋಡು ಪಿ.ಡಿ.ಒ. ಜಯಪ್ರಕಾಶ್ ಗುಂಡಿ ಯವರನ್ನು ಸಂಪಾಜೆ ಗ್ರಾ.ಪಂ. ಪ್ರಭಾರ ಪಿ.ಡಿ.ಒ. ಆಗಿ ನೇಮಿಸಲಾಗಿದೆ. ಸಂಪಾಜೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿಟಾ ಓಲ್ಗಾ ಡಿಸೋಜ ರವರು ರಜೆ ವಿಸ್ತರಿಸಿರುವ ಕಾರಣ ಪ್ರಭಾರ ವಹಿಸಲಾಗಿದ್ದ ಪದ್ಮಾರವರಿಂದ ಪ್ರಭಾರ ಹಿಂಪಡೆದು, ವಾರಕ್ಕೆ ಎರಡು ದಿನ ಸಂಪಾಜೆ ಗ್ರಾ.ಪಂ. ಪಿ.ಡಿ.ಒ. ಆಗಿ ಕಾರ್ಯನಿರ್ವಹಿಸಲು ಜಯಪ್ರಕಾಶರಿಗೆ ಸುಳ್ಯ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಆದೇಶ ನೀಡಿದ್ದಾರೆ.