ಅಮರಮುಡ್ನೂರು : ಗೃಹಲಕ್ಷ್ಮೀ ಯೋಜನೆ ಅನುಷ್ಠಾನ ಕಾರ್ಯಕ್ರಮ

0

ನೂರಾರು ಜನ ಫಲಾನುಭವಿ ಮಹಿಳೆಯರು ಭಾಗಿ

ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆಯ ಅನುಷ್ಟಾನ ಕಾರ್ಯಕ್ರಮವು ಇಂದು ಅಮರಮುಡ್ನೂರು ಗ್ರಾಮ ಪಂಚಾಯತ್ ನಲ್ಲಿ ನಡೆಯಿತು.
ನೂರಾರು ಜನ ಫಲಾನುಭವಿ ಮಹಿಳೆಯರು ಭಾಗವಹಿಸಿ ಎಲ್.ಇ.ಡಿ ಪರದೆಯ ಮೂಲಕ ಕಾರ್ಯಕ್ರಮ ವೀಕ್ಷಿಸಿದರು.


ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ಜಾನಕಿ ಕಂದಡ್ಕ ,ಉಪಾಧ್ಯಕ್ಷೆ ಭುವನೇಶ್ವರಿ, ಪಿ.ಡಿ.ಒ ದಯಾನಂದ ಪತ್ತುಕುಂಜ,ಗ್ರಾ.ಪಂ.ಸದಸ್ಯರು,
ವೆಂಕಟ್ರಮಣ ಗೌಡ ಇಟ್ಟಿಗುಂಡಿ, ಅಣ್ಣಾಜಿ ಗೌಡ ಪೈಲೂರು,ದಯಾನಂದ ಬೊಲ್ಕೊಡಿ,ಚೇತನ್ ಚಿಲ್ಪಾರು, ಪವನ್ ಮುಂಡ್ರಾಜೆ, ಚೆನ್ನಕೇಶವ, ಹೂವಪ್ಪ ಗೌಡ ಆರ್ನೋಜಿ,ಹಾಗೂ ಕಾಂಗ್ರೆಸ್ ಕಾರ್ಯಕರ್ತರು, ಊರವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.