ಜಾಲ್ಸೂರು: ವಿನೋಬನಗರ ಸುಬ್ರಾಯ ಅನಂತ ಕಾಮತ್ ಆ್ಯಂಡ್ ಸನ್ಸ್ ಗೇರುಬೀಜ ಕಾರ್ಖಾನೆಯಲ್ಲಿ ಸುವರ್ಣ ಮಹೋತ್ಸವ ಸಂಭ್ರಮ

0

ಉಪೇಂದ್ರ ಕಾಮತ್ ದಂಪತಿ ಕಾರ್ಮಿಕರ ಕಷ್ಟ ಕಾರ್ಪಣ್ಯಗಳಿಗೆ ಧ್ವನಿಯಾಗಿದ್ದಾರೆ: ಮೊಗರ್ನಾಡು ಜನಾರ್ದನ ಭಟ್

ಜಾಲ್ಸೂರು ಗ್ರಾಮದ ವಿನೋಬನಗರದಲ್ಲಿರುವ ಹಿರಿಯ ಉದ್ಯಮಿ ಕೆ. ಉಪೇಂದ್ರ ಕಾಮತ್ ಅವರ ಮಾಲಕತ್ವದ ಕೆ. ಸುಬ್ರಾಯ ಅನಂತ ಕಾಮತ್ ಆ್ಯಂಡ್ ಸನ್ಸ್ ಗೇರುಬೀಜ ಕಾರ್ಖಾನೆಯು ಯಶಸ್ವಿ ಐವತ್ತು ಸಂವತ್ಸರಗಳನ್ನು ಪೂರೈಸಿದ ಸಲುವಾಗಿ ಸುವರ್ಣ ಮಹೋತ್ಸವ ಸಂಭ್ರಮ ಕಾರ್ಯಕ್ರಮವು ಆ.30ರಂದು ಸಂಸ್ಥೆಯ ಸಭಾಂಗಣದಲ್ಲಿ ಜರುಗಿತು.


ಮಧ್ಯಾಹ್ನ ಶ್ರೀ ಸತ್ಯನಾರಾಯಣ ದೇವರ ಪೂಜೆ ಹಾಗೂ ಅನ್ನಸಂತರ್ಪಣೆ ಜರುಗಿತು.

ಬಳಿಕ ನಡೆದ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಗೇರುಬೀಜ ಕಾರ್ಖಾನೆಯ ಸಂಸ್ಥಾಪಕ ಹಿರಿಯರಾದ ಉಪೇಂದ್ರ ಕಾಮತ್, ಶ್ರೀಮತಿ ಪದ್ಮಾವತಿ ಕಾಮತ್, ಸುಧಾಕರ ಕಾಮತ್ ಅವರ ಮಾವ ಪಾಂಡುರಂಗ ನಾಯಕ್ ಹೊಸದುರ್ಗ, ಅತ್ತೆ ಶ್ರೀಮತಿ ಮೀರಾ ನಾಯಕ್ ವೇದಿಕೆಯಲ್ಲಿದ್ದರು.
ಉದ್ಯಮಿ ಸುಧಾಕರ ಕಾಮತ್
ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಕೆ. ಸುಬ್ರಾಯ ಅನಂತ ಕಾಮತ್ & ಸನ್ಸ್ ಸಂಸ್ಥೆಯ ಸ್ಥಾಪನೆ ಹಾಗೂ ಕಾರ್ಖಾನೆ ಬೆಳೆದುಬಂದ ಹಾದಿಯನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಉಪೇಂದ್ರ ಕಾಮತ್ ಹಾಗೂ ಶ್ರೀಮತಿ ಪದ್ಮಾವತಿ ಕಾಮತ್ ದಂಪತಿಯ ಸಂಬಂಧಿಕರನ್ನು ಸುಧಾಕರ ಕಾಮತ್ ಹಾಗೂ ಶ್ರೀಮತಿ ಶುಭ ಕಾಮತ್ ದಂಪತಿಗಳು ಸನ್ಮಾನಿಸಿ, ಗೌರವಿಸಿದರು. ನೌಕರ ವೃಂದದವರು ಸೇರಿ ಉಪೇಂದ್ರ ಕಾಮತ್ ಹಾಗೂ ಶ್ರೀಮತಿ ಪದ್ಮಾವತಿ ಕಾಮತ್ ದಂಪತಿಗಳನ್ನು ಹೂಹಾರ ಹಾಕಿ ಸನ್ಮಾನಿಸಿ, ಗೌರವಿಸಿದರು.

ಮುಖ್ಯ ಅತಿಥಿಯಾಗಿದ್ದ ಮೊಗರ್ನಾಡು ಲಕ್ಷ್ಮೀ ನರಸಿಂಹ ದೇವಸ್ಥಾನದ ಆಡಳಿತ ಮೊಕ್ತೇಸರ ಮೊಗರ್ನಾಡು ಜನಾರ್ದನ ಭಟ್ ಅವರು ಮಾತನಾಡಿ ” 1973ರಲ್ಲಿ ಪ್ರಾರಂಭಗೊಂಡ ಸಂಸ್ಥೆ ಕಾರ್ಮಿಕರ ಪೂರ್ಣ ಸಹಕಾರದಿಂದ ಸುವರ್ಣ ಸಂಭ್ರಮಕ್ಕೆ ಕಾಲಿರಿಸಿದೆ. ಉಪೇಂದ್ರ ಕಾಮತ್ ಹಾಗೂ ಶ್ರೀಮತಿ ಪದ್ಮಾವತಿ ಕಾಮತ್ ದಂಪತಿಗಳು ಧಾರ್ಮಿಕ, ಶೈಕ್ಷಣಿಕ ಸಂಸ್ಥೆಗಳ ಮೂಲಕ ದೇವರನ್ನು ನೋಡಿದ್ದಾರೆ. ಇವರು ಬಡವರಿಗೆ ಮಾಡಿದ ದಾನ – ಧರ್ಮಗಳು ಅವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಕೆ.ಎಸ್.ಎ. ಕಾಮತ್ & ಸನ್ಸ್ ಸಂಸ್ಥೆಯು ತನ್ನ ಗ್ರಾಹಕರು ಹಾಗೂ ಕೆಲಸದ ಕಾರ್ಮಿಕರನ್ನು ಸಮಾನಭಾವದಿಂದ ನೋಡಿ, ಸಂಸ್ಥೆಯ ಕಾರ್ಮಿಕರ ಕಷ್ಟ ಕಾರ್ಪಣ್ಯಗಳಿಗೆ ಧ್ವನಿಯಾಗಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗೇರುಬೀಜ ಕಾರ್ಖಾನೆಯಲ್ಲಿ ಸುಮಾರು ಮೂವತ್ತು ವರ್ಷಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡಿದ ಕಮಲಾಕ್ಷ ನಾಯಕ್, ರಮಾನಾಥ ಶೆಣ್ಯೆ, ಸೇರಿದಂತೆ ಹಿರಿಯ ಕಾರ್ಮಿಕರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸುಧಾಕರ ಕಾಮತ್ ಅವರ ಪುತ್ರಿಯರಾದ ಶ್ರೀಮತಿ ಸಿಂಧು ಕಾಮತ್, ಶ್ರೀಮತಿ ಸುಮನ್ ಕಾಮತ್, ಅಳಿಯಂದಿರಾದ ಮಯೂರ್ ಕಾಮತ್, ವಿಕ್ರಂಸಿಂಹ ನಾಯಕ್, ಆರ್.ಎಸ್.ಎಸ್. ಮುಖಂಡ ನ.ಸೀತಾರಾಮ, ಅಡ್ಕಾರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಜಯರಾಮ ರೈ ಜಾಲ್ಸೂರು, ಶರತ್ ಅಡ್ಕಾರು, ಉದ್ಯಮಿ ಕೃಷ್ಣ ಕಾಮತ್ ಅರಂಬೂರು ಸೇರಿದಂತೆ ಸಂಸ್ಥೆಯ ಕಾರ್ಮಿಕರು, ವಿವೇಕಾನಂದ ವಿದ್ಯಾಸಂಸ್ಥೆಯ ಶಿಕ್ಷಕವೃಂದದವರು ಉಪಸ್ಥಿತರಿದ್ದರು.