ಸುಳ್ಯ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಸಂಸ್ಕ್ರತ ಭಾಷಾ ದಿನಾಚರಣೆ

0

ಸಂಸ್ಕೃತ ಭಾಷೆಯನ್ನು ಅಮೃತ ಭಾಷೆಯನ್ನಾಗಿಸೋಣ : ಜಯಲಕ್ಷ್ಮಿ ದಾಮ್ಲೆ

“ಸಂಸ್ಕೃತವು ಹಿಂದೆ ಜನರ ಆಡುನುಡಿಯಾಗಿತ್ತು. ಹಾಗಾಗಿಯೇ ವೇದ, ವೇದಾಂಗ, ಮಹಾಭಾರತ ಮತ್ತು ರಾಮಾಯಣ ಎಲ್ಲವೂ ಸಂಸ್ಕೃತದಲ್ಲಿದೆ. ಸಂಸ್ಕೃತವನ್ನು ಕಬ್ಬಿಣದ ಕಡಲೆ ಎನ್ನುತ್ತಾರೆ. ಆದರೆ ಹಾಗೇನೂ ಅಲ್ಲ, ಅದು ಕಲ್ಲು ಸಕ್ಕರೆ. ಪ್ರಾಚೀನ ಕಾಲದ ನಳಂದ, ತಕ್ಷಶಿಲಾ ವಿಶ್ವವಿದ್ಯಾನಿಲಯಗಳಲ್ಲಿ ಸಂಸ್ಕೃತದ ಕಲಿಕೆಯು ಸಾಂಗವಾಗಿತ್ತು. ಮೆಕಾಲೆ ಶಿಕ್ಷಣದಿಂದಾಗಿ ಸಂಸ್ಕೃತ ಭಾಷೆಯು ಅಧಃಪತನ ಕಂಡಿತು. ಇಂಗ್ಲಿಷಿಗೆ ಜೋತು ಬಿದ್ದ ಬಳಿಕ ಸಂಸ್ಕೃತವನ್ನು ಮೃತಭಾಷೆ ಎಂದರು.

ಆದರೆ ಈಗ ಅದು ಮುನ್ನೆಲೆಗೆ ಬಂದಿದೆ.
ನಾವು ಸಂಸ್ಕೃತದಲ್ಲಿ ಮಾತನಾಡುವುದರ ಮೂಲಕ ಸಂಸ್ಕೃತ ಭಾಷೆಯನ್ನು ಉಳಿಸೋಣ” ಎಂದು ಸ್ನೇಹ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆಯವರು ಹೇಳಿದರು.
ಅವರು ಆ.31ರಂದು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಸಂಸ್ಕೃತ ಭಾಷಾ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆಯವರು ಮಾತನಾಡಿ “ಸಂಸ್ಕೃತ ಸಮೃದ್ಧವಾದ ಭಾಷೆ. ಅದು ಎಲ್ಲಾ ಭಾಷೆಗಳಲ್ಲೂ ಅಡಕವಾಗಿದೆ. ಅದನ್ನು ಅರ್ಥೈಸಿಕೊಂಡು ಕಲಿತು ಸಂಸ್ಕೃತ ಭಾಷೆಯನ್ನು ಉಳಿಸೋಣ” ಎಂದು ಹೇಳಿದರು.
ಶಿಕ್ಷಕಿ ಶ್ರೀಮತಿ ಜಯಂತಿ ಕೆ ಸ್ವಾಗತಿಸಿದರು. ಶಿಕ್ಷಕ ದೇವಿಪ್ರಸಾದ ಜಿ ಸಿ ವಂದಿಸಿದರು. ಶಿಕ್ಷಕಿ ಶ್ರೀಮತಿ ಶ್ರೀದೇವಿ ಪಿ. ಎಸ್ ನಿರೂಪಿಸಿದರು. ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು ಶಿಕ್ಷಕರು ಉಪಸ್ಥಿತರಿದ್ದರು.