ಬ್ರಿಟಿಷರ ವಿರುದ್ಧ ರೈತರು ದಂಗೆ ಎದ್ದು ಹೋರಾಡಿದ ದೇಶದ ಪ್ರಥಮ ಘಟನೆಯಾದ 1837 ರ ಅಮರ ಸುಳ್ಯದ ರೈತ ಹೋರಾಟದ ನೇತೃತ್ವ ವಹಿಸಿದ್ದ ವೀರ ಯೋಧ ಕೆದಂಬಾಡಿ ರಾಮಯ್ಯ ಗೌಡರ ಊರಾದ ಉಬರಡ್ಕ ಮಿತ್ತೂರಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ನಿರ್ಮಿಸಲು ರಾಜ್ಯ ಸರಕಾರ 30 ಲಕ್ಷ ರೂ.ಗಳನ್ನು ಮಂಜೂರು ಮಾಡಿದೆ” ಎಂದು ಉಬರಡ್ಕ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಗೂ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್ ತಿಳಿಸಿದ್ದಾರೆ.
ಸ್ಮಾರಕ ನಿರ್ಮಾಣಕ್ಕೆ ಸೂಕ್ತ ಜಾಗ ಗುರುತಿಸಿಕೊಡುವಂತೆ ಲೋಕೋಪಯೋಗಿ ಇಲಾಖೆಯು ಉಬರಡ್ಕ ಗ್ರಾಮ ಪಂಚಾಯತ್ ಗೆ ಪತ್ರ ಬರೆದಿದೆ.