ರಿಕ್ಷಾ ಪಾರ್ಕಿಂಗ್ ನಲ್ಲಿ ಮೊಸರು ಕುಡಿಕೆ

0

ಸುಳ್ಯದ ಖಾಸಗಿ ಬಸ್ ನಿಲ್ದಾಣದ ಬಳಿಯ ರಿಕ್ಷಾ ಪಾರ್ಕಿಂಗ್ ನಲ್ಲಿ ರಿಕ್ಷಾ ಮತ್ತು ಟ್ಯಾಕ್ಸಿ ಕಾರು ಚಾಲಕ ಮಾಲಕರ, ಅಂಗಡಿ ಮಳಿಗೆಯವರ ನೇತೃತ್ವದಲ್ಲಿ ಮೊಸರು ಕುಡಿಕೆ ಕಾರ್ಯಕ್ರಮದಲ್ಲಿ ಮಡಕೆ ಒಡೆಯುವ ಸ್ಪರ್ಧೆಯು ಸೆ.6 ರಂದು ನಡೆಯಿತು.

ಪ್ರಥಮ ಬಹುಮಾನವನ್ನು ಕಾರು ಚಾಲಕ ಗಣೇಶ್ ಪರ್ಲಿಕಜೆ, ದ್ವಿತೀಯ ಬಹುಮಾನವನ್ನು ರಿಕ್ಷಾ ಚಾಲಕ ಪ್ರಕಾಶ್ ಪೂಜಾರಿ ಪಡೆದುಕೊಂಡರು.
ಪ್ರಥಮ ಬಹುಮಾನ ಪ್ರಾಯೋಜಕರಾಗಿ ಅಶೋಕ್ ಪಾನಿಪುರಿಯ ಚಂದ್ರಶೇಖರ ಶೆಟ್ಟಿ ಹಾಗೂ ದ್ವಿತೀಯ ಬಹುಮಾನದ ಪ್ರಾಯೋಜಕರಾಗಿ ರಿಕ್ಷಾ ಚಾಲಕ ಭಾನುಪ್ರಕಾಶ್ ನೀಡಿದರು.