ಜಗತ್ತಿಗೆ ವಂಧ್ಯನಾದ ಶ್ರೀ ಕೃಷ್ಣ ಪರಮಾತ್ಮನು ಪವಿತ್ರ ಗ್ರಂಥ ಭಗವದ್ಗೀತೆಯ ಮೂಲಕ ಧರ್ಮ ಜಾಗೃತಿಯ ಸಂದೇಶ ಸಾರಿದ್ದಾನೆ- ವೆಂಕಟೇಶ್ ಶಾಸ್ತ್ರಿಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಬ್ರಹ್ಮ ಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿಯವರ ಮಾರ್ಗದರ್ಶನದಂತೆ ಶ್ರೀ ಕೃಷ್ಣ ಜನ್ಮಾಷ್ಠಮಿ ಉತ್ಸವ ಸೆ.6 ರಂದು ಭಕ್ತಿ ಸಡಗರದಿಂದ ದೇವಳದ ವಠಾರದಲ್ಲಿ ಜರುಗಿತು.ಬೆಳಗ್ಗೆ ಅರ್ಚಕ ಹರ್ಷಿತ್ ಬನ್ನಿಂತಾಯ ರವರ ನೇತೃತ್ವದಲ್ಲಿ ದೇವರಿಗೆ ನಿತ್ಯ ಪೂಜೆಯು ನೆರವೇರಿತು.
ಬಳಿಕ ಕಾಂಚಿ ಕಾಮಕೋಟಿ ವೇದ ಪಾಠ ಶಾಲೆಯ ಗುರುಗಳಾದ ವೆಂಕಟೇಶ್ ಶಾಸ್ತ್ರಿ ಯವರ ನೇತೃತ್ವದಲ್ಲಿಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆಯು ನಡೆಯಿತು.ಬೆಳಗ್ಗೆ ಉತ್ಸವದ ಪ್ರಯುಕ್ತ ನಡೆಯಲಿರುವ ವಿವಿಧ ಸ್ಪರ್ಧೆಗಳಿಗೆ ಈ ಸಂದರ್ಭದಲ್ಲಿ ಚಾಲನೆ ನೀಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ ವಹಿಸಿದ್ದರು. ವೆಂಕಟೇಶ್ ಶಾಸ್ತ್ರೀಯ ವರು ದೀಪ ಪ್ರಜ್ವಲಿಸಿ ಅಷ್ಠಮಿ ಆಚರಣೆಯ ಮಹತ್ವದ ಕುರಿತು ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಅನುವಂಶಿಕ ಮೊಕ್ತೇಸರ ಹೇಮಚಂದ್ರ ಬೈಪಡಿತ್ತಾಯ, ಶ್ರೀಪತಿ ಬೈಪಡಿತ್ತಾಯ, ಸೇವಾ ಸಮಿತಿ ಅಧ್ಯಕ್ಷ ಪುರುಷೋತ್ತಮ ಗೌಡ ಕೋಲ್ಚಾರು, ವ್ಯ.ಸ.ಮಾಜಿ ಅಧ್ಯಕ್ಷ ಪ್ರಸನ್ನ ಕೆ.ಸಿ.ಬಡ್ಡಡ್ಕ ಉಪಸ್ಥಿತರಿದ್ದರು. ಕು.ಪಲ್ಲವಿ ಗಡಿಪಣೆ ಪ್ರಾರ್ಥಿಸಿದರು.ಸೇವಾ ಸಮಿತಿ ಕಾರ್ಯದರ್ಶಿ ರಾಮಚಂದ್ರ ಆಲೆಟ್ಟಿ ಸ್ವಾಗತಿಸಿದರು. ವ್ಯ.ಸ.ಸದಸ್ಯೆ ಮಮತಾ ನಾರ್ಕೋಡು ವಂದಿಸಿದರು. ಭಜನಾ ಸಂಘದ ಕಾರ್ಯದರ್ಶಿ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.ಮಧ್ಯಾಹ್ನ ಮಹಾಪೂಜೆಯಾಗಿ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು.
ಈ ಸಂದರ್ಭದಲ್ಲಿ ಸಾರ್ವಜನಿಕ ಮಕ್ಕಳಿಗೆ ,ಮಹಿಳೆಯರಿಗೆ, ಪುರುಷರಿಗೆ ಕಪ್ಪೆ ಜಿಗಿತ,ಕಾಳು ಹೆಕ್ಕುವ ಸ್ಪರ್ಧೆ, ಓಟದ ಸ್ಪರ್ಧೆ, ಭಕ್ತಿ ಗೀತೆ ಸ್ಪರ್ಧೆ, ಮಡಕೆ ಒಡೆಯುವ ಸ್ಪರ್ಧೆ, ಸಂಗೀತ ಕುರ್ಚಿ, ಹಗ್ಗ ಜಗ್ಗಾಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ರಗೆ ಬಹುಮಾನ ವಿತರಿಸಲಾಯಿತು.ಸಂಧ್ಯಾ ಕಾಲದಲ್ಲಿ ವಿಶೇಷವಾಗಿ ಭಜನಾ ಸೇವೆಯು ನಡೆಯಿತು. ರಾತ್ರಿ ಮಹಾ ಮಂಗಳಾರತಿಯಾಗಿ ಪ್ರಸಾದ ವಿತರಣೆ ಯಾಯಿತು. ವ್ಯವಸ್ಥಾಪನಾ ಸಮಿತಿಯ ಸದಸ್ಯರು, ಸೇವಾ ಸಮಿತಿ, ಜೀರ್ಣೋದ್ಧಾರ ಸಮಿತಿ, ಭಜನಾ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಸಹಕರಿಸಿದರು. ಗ್ರಾಮದ ಭಕ್ತಾದಿಗಳು ಸಾರ್ವಜನಿಕರು ಆಗಮಿಸಿ ಉತ್ಸವದಲ್ಲಿ ಪಾಲ್ಗೊಂಡರು.