ವಾಹನ ಅಪಘಾತ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಎಚ್ಚೆತ್ತ ಗ್ರಾ.ಪಂ.
ಜಾಲ್ಸೂರು ಗ್ರಾಮದ ಅಡ್ಕಾರಿನಲ್ಲಿ ಮುಖ್ಯರಸ್ತೆಯ ಬದಿಯಲ್ಲಿದ್ದ ಮಣ್ಣನ್ನು ಗ್ರಾಮ ಪಂಚಾಯತಿ ವತಿಯಿಂದ ಜೆಸಿಬಿ ಮೂಲಕ ತೆರವು ಕಾರ್ಯ ಮಾಡಲಾಗಿದೆ.
ಅಡ್ಕಾರಿನಲ್ಲಿ ಮುಖ್ಯರಸ್ತೆಯ ಒಂದು ಬದಿಯಲ್ಲಿ ಮಣ್ಣಿನ ದಿಬ್ಬವಿದ್ದು, ಮಳೆನೀರು ರಸ್ತೆಯ ಒಂದು ಬದಿ ಆವರಿಸಿತ್ತು.ಇದರಿಂದ ಸಾರ್ವಜನಿಕರಿಗೆ ರಸ್ತೆ ಬದಿಯಲ್ಲಿ ನಡೆದಾಡಲು ಕಷ್ಟಕರ ಪರಿಸ್ಥಿತಿಯಿತ್ತು.
ಕಳೆದ ಎರಡು ದಿನಗಳ ಹಿಂದೆ ಇದೇ ಸ್ಥಳದಲ್ಲಿ ರಾತ್ರಿಯ ವೇಳೆ ಪಾದಾಚಾರಿ ವ್ಯಕ್ತಿಯೋರ್ವರು ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ವಾಹನ ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡು , ಸ್ಥಳದಲ್ಲೇ ಮೃತಪಟ್ಟಿದ್ದರು.
ರಸ್ತೆಯಲ್ಲಿ ಮಣ್ಣಿನ ದಿಬ್ಬವಿದ್ದು, ಮಳೆ ಸುರಿದ ವೇಳೆ ಕೆಸರಾಗಿ ರಸ್ತೆಯಲ್ಲಿ ನೀರು ಆವರಿಸುತ್ತಿದ್ದುದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಸೆ.7ರಂದು ಜಾಲ್ಸೂರು ಗ್ರಾಮ ಪಂಚಾಯತಿ ವತಿಯಿಂದ ಜೆಸಿಬಿ ಮೂಲಕ ಮಣ್ಣು ತೆರವು ಕಾರ್ಯ ನಡೆಯುತ್ತಿದೆ.
ಈ ಸಂದರ್ಭದಲ್ಲಿ ಜಾಲ್ಸೂರು ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಅರ್ಭಡ್ಕ, ಸ್ಥಳೀಯರಾದ ಹಮೀದ್ ಅಡ್ಕಾರು, ಉಸ್ಮಾನ್ ಅಡ್ಕಾರು, ದಿನೇಶ್ ಅಡ್ಕಾರು, ಖಯ್ಯೂಮ್ ಅಡ್ಕಾರು, ಶಾಫಿ ಅಡ್ಕಾರು, ಇಬ್ರಾಹಿಂ ಅಡ್ಕಾರು, ನಾಸಿರ್ ಅಡ್ಕಾರು, ಮೂಸಾ ಅಡ್ಕಾರು ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.