ಆಲೆಟ್ಟಿ ಗ್ರಾಮದ ಗುಂಡ್ಯ ಮಾಡರ ಮನೆ ಶ್ರೀ ಉಳ್ಳಾಕುಳು ದೇವಸ್ಥಾನದಲ್ಲಿ ತಾಂಬೂಲ ಪ್ರಶ್ನಾ ಚಿಂತನೆಯು ಸೆ.9 ರಂದು ನಡೆಯಿತು.
ಕೇರಳದ ದೈವಜ್ಞರಾದ ಚೌಕಿ ಜ್ಯೋತಿಷ್ಯ ಬಾಲಕೃಷ್ಣ ನಾಯರ್ ರವರು ಪ್ರಶ್ನಾ ಚಿಂತನೆ ಇರಿಸಿ ದೈವಸ್ಥಾನಕ್ಕೆ ಸಂಬಂಧಿಸಿದ ಪೂರ್ವಾಪರ ಚಿಂತನೆ ನಡೆಸಿದರು.
ಮಾಡರ ಮನೆಯ ಪ್ರವೇಶ ಮಹಾದ್ವಾರದ ನವೀಕರಣದ ಬಗ್ಗೆ ಹಾಗೂ
ದೈವಸ್ಥಾನದಲ್ಲಿ ನಡೆಯಲಿರುವ ನೇಮೋತ್ಸವದ ದಿನ ಬದಲಾವಣೆಯ ಕುರಿತು ಚಿಂತಿಸಲಾಯಿತು. ಸಾನಿಧ್ಯದಲ್ಲಿ ನಡೆಯಬೇಕಾಗಿರುವ ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸುವ ಸಲುವಾಗಿ ಚಿಂತನೆ ನಡೆಸಲಾಯಿತು.
ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಅಶೋಕ ಪ್ರಭು ಸುಳ್ಯ,ಉಪಾಧ್ಯಕ್ಷ ಶಿವರಾಮ ರೈ ಗುಂಡ್ಯ, ಆಲೆಟ್ಟಿ ಸದಾಶಿವ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಹೇಮಚಂದ್ರ ಬೈಪಡಿತ್ತಾಯ, ಆಲೆಟ್ಟಿ ಸದಾಶಿವ ದೇವಸ್ಥಾನದ ವ್ಯ.ಸ.ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ,ಶ್ರೀಪತಿ ಬೈಪಡಿತ್ತಾಯ, ಜಯಪ್ರಕಾಶ್ ಬೈಪಡಿತ್ತಾಯ, ಶ್ರೀಮತಿ ಶಾಂತಾ ಬೈಪಡಿತ್ತಾಯ, ಕೋಶಾಧಿಕಾರಿ ಮಹಾಲಿಂಗೇಶ್ವರ ಭಟ್ ನೆಡ್ಚಿಲು, ವೆಂಕಟ್ರಮಣ ಭಟ್ ನೆಡ್ಚಿಲು,ಸುಧಾಮ ಆಲೆಟ್ಟಿ, ಪ್ರಸನ್ನ ಕೆ.ಸಿ.ಬಡ್ಡಡ್ಕ, ಮಾಧವ ಗೌಡ ಗುಂಡ್ಯ, ಲಕ್ಷ್ಮಣ ಗೌಡ ಪರಿವಾರ, ನಂಜುಂಡ ದೇವಸ್ಯ, ಚಂದ್ರಶೇಖರ ಪಂಜಿಮಲೆ, ಬಾಲಕೃಷ್ಣ ಪರಿವಾರ, ಸುಧಾಕರ ಆಲೆಟ್ಟಿ,
ಪವಿತ್ರನ್ ಗುಂಡ್ಯ, ಉಮೇಶ್ ಕೂಟೇಲು, ಶೇಷಪ್ಪ ಗುಂಡ್ಯ, ಜನಾರ್ದನ ಗುಂಡ್ಯ, ಬೆಳ್ಯಪ್ಪ ನಾಯ್ಕ್ ಕೂಟೇಲು,ನವೀನ್ ಗುಂಡ್ಯ, ಬಾಬು ಅಜಿಲ, ಬೊಳ್ಳುಕುಂಞ ಗುಂಡ್ಯ, ಯೋಗೀಶರಾಮ ಗುಂಡ್ಯ, ಶಿವಪ್ರಸಾದ್ ಆಲೆಟ್ಟಿ ಹಾಗೂ ಸ್ಥಳೀಯ ಮಹಿಳೆಯರು ಮತ್ತು ಪುರುಷರು ಉಪಸ್ಥಿತರಿದ್ದರು.