ಕೊಡಗು ಸಂಪಾಜೆ ಸಾರ್ವಜನಿಕ ಶ್ರೀ ದೇವತಾರಾಧನ ಸಮಿತಿಯ ವತಿಯಿಂದ ಶ್ರೀ ಗೌರಿ ಗಣೇಶೋತ್ಸವವು ಸೆ.18ರಿಂದ 20ರವರೆಗೆ ಸಂಪಾಜೆ ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ಜರುಗಲಿದೆ.
ಸೆ.18ರಂದು ಗೌರಿ ತದಿಗೆ ಪ್ರಯುಕ್ತ ವಿವಿಧ ವೈಧಿಕ ಕಾರ್ಯಕ್ರಮ ಜರುಗಲಿದ್ದು, ಪೂರ್ವಾಹ್ನ ಪುರುಷರಿಗೆ ಮತ್ತು ಮಹಿಳೆಯರಿಗೆ ಕೆಸರುಗದ್ದೆ ಹಗ್ಗಜಗ್ಗಾಟ ಜರುಗಲಿದೆ.
ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಕಲ್ಲಡ್ಕ ವಿಠಲ ನಾಯಕ್ ಮತ್ತು ಬಳಗದಿಂದ ಗೀತಾ ಸಾಹಿತ್ಯ ಸಂಭ್ರಮ, ರಂಗಮಯೂರಿ ಕಲಾ ಶಾಲೆಯವರಿಂದ ವಿನೂತನ ಕಾರ್ಯಕ್ರಮ ನಡೆಯಲಿದೆ.
ಸೆ.19ರಂದು ಬೆಳಿಗ್ಗೆ ಗಣೇಶ ಮೂರ್ತಿ ಪ್ರತಿಷ್ಠಾಪನೆ, ವಿವಿಧ ವೈಧಿಕ ಕಾರ್ಯಕ್ರಮಗಳು, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಧಾರ್ಮಿಕ ಉಪನ್ಯಾಸ, ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ.
ಸೆ.20ರಂದು ಅಪರಾಹ್ನ ಬಹುಮಾನ ವಿತರಣಾ ಕಾರ್ಯಕ್ರಮ ಜರುಗಲಿದೆ. ಬಳಿಕ ಗೌರಿ – ಗಣೇಶ ಮೂರ್ತಿಯ ವಿಸರ್ಜನಾ ಶೋಭಾಯಾತ್ರೆಯು ಹೊರಟು ಚೌಕಿ ಸಂಗಮದಲ್ಲಿ ಜಲಸ್ಥಂಭನ ನಡೆಯಲಿದೆ.