ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ , ಸ್ವಚ್ಛ ಭಾರತ್ ಮಿಷನ್ ( ಗ್ರಾಮೀಣ) ಯೋಜನೆಯಡಿ ವಿವಿಧ ಘಟಕಗಳನ್ನು ಉತ್ತಮವಾಗಿ ಅನುಷ್ಠಾನಗೊಳಿಸಿರುವ ಸಾಧನೆಗಾಗಿ” ಸ್ವಚ್ಛ ಸರ್ವೇಕ್ಷಣ ಗ್ರಾಮೀಣ 2023ನೇ ಪ್ರಶಸ್ತಿ”ಗೆ ಅರಂತೋಡು ಗ್ರಾಮ ಪಂಚಾಯತಿ ಆಯ್ಕೆಗೊಂಡಿದ್ದು, ಸೆ.11ರಂದು ಮಂಗಳೂರಿನ ಜಿಲ್ಲಾ ಪಂಚಾಯತಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾ.ಪಂ. ಸಹಾಯಕ ನಿರ್ದೇಶಕಿ ಶ್ರೀಮತಿ ಸರೋಜಿನಿ ಅವರು ಅರಂತೋಡು ಗ್ರಾಮ ಪಂಚಾಯತಿ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು.
ಸುಳ್ಯ ತಾಲೂಕಿನಿಂದ ಈ ಪ್ರಶಸ್ತಿಗೆ ಆಯ್ಕೆಯಾದ ಏಕೈಕ ಗ್ರಾಮ ಪಂಚಾಯತ್ ಅರಂತೋಡು ಆಗಿದ್ದು, 2023ನೇ ಸಾಲಿನಲ್ಲಿ ನಡೆದ ತಾಲೂಕು ಮಟ್ಟದ ಸಮೀಕ್ಷೆಯಲ್ಲಿ 343 ಅಂಕ ಪಡೆದು ಜಿಲ್ಲಾ ಮಟ್ಟಕ್ಕೆ ಅರ್ಹವಾಗಿದೆ.