ಗುತ್ತಿಗಾರು : ಅಮರ ಸಂಜೀವಿನಿ ಒಕ್ಕೂಟದ ಸಹಯೋಗದೊಂದಿಗೆ ಸ್ವಚ್ಚತಾ ಕಾರ್ಯಕ್ರಮ

0

ವಾರ್ಡ್ ಮಟ್ಟದಲ್ಲೂ ಸ್ವಚ್ಚತಾ ಅಭಿಯಾನ ಆರಂಭ

ಗುತ್ತಿಗಾರು ಗ್ರಾಮ ಪಂಚಾಯತ್ ಮಟ್ಟದ ಅಮರ ಸಂಜೀವಿನಿ ಒಕ್ಕೂಟದ ವತಿಯಿಂದ ಕಡ್ತಲ್ ಕಜೆ- ವಳಲಂಬೆ- ಕಾಜಿಮಡ್ಕ- ವಳಲಂಬೆ ಅಂಗವಾಡಿ-ಹಾಗೂ ವಳಲಂಬೆಯ ರಸ್ತೆ ಬದಿಗಳಲ್ಲಿ ಸ್ವಚ್ಚತೆ ಸೆ.13 ರಂದು ಮಾಡಲಾಯಿತು.

ಗುತ್ತಿಗಾರು ಟಾಸ್ಕ್ ಫೋರ್ಸ್ ವತಿಯಿಂದ ನಡೆಸಲ್ಪಡುವ ಸ್ವಚ್ಚತಾ ಅಭಿಯಾನದ ಕಾರ್ಯಕ್ರಮದ ಮುಂದುವರಿದ ಭಾಗವಾಗಿ ವಾರ್ಡ್ ಮಟ್ಟದಲ್ಲೂ ಸ್ವಚ್ಚತಾ ಕಾರ್ಯಾರಂಭ ಆರಂಭವಾಗಿದೆ.

ರಸ್ತೆ ಬದಿಗಳಲ್ಲಿದ್ದ ಕಸವನ್ನು ಗೋಣಿಚೀಲದಲ್ಲಿ ತುಂಬಿಸಿ ವಿಲೇವಾರಿ ಮಾಡಲಾಯಿತು.
ಗುತ್ತಿಗಾರು ಪಂಚಾಯತ್ ಅಧ್ಯಕ್ಷರಾದ ಸುಮಿತ್ರ ಮೂಕಮಲೆ ಉಪಸ್ಥಿತಿಯಲ್ಲಿ
ಈ ಸ್ವಚ್ಚತಾ ಕಾರ್ಯದಲ್ಲಿ ಶಂಖಪಾಲ ಸ್ತ್ರೀ ಶಕ್ತಿ, ಶಂಖಶ್ರೀ ಸ್ತ್ರೀ ಶಕ್ತಿ, ಶ್ರೀ ದುರ್ಗಾ ಸ್ತ್ರೀ ಶಕ್ತಿ, ಯಶಸ್ವಿ ಸಂಜೀವಿನಿ, ಬಾಂಧವ್ಯ ಸಂಜೀವಿನಿ,ಚಿಗುರು ಸಂಜೀವಿನಿ ಸಂಘದ ಸದಸ್ಯರು, ಅಂಗನವಾಡಿ ಕಾರ್ಯಕರ್ತೆ,ಆಶಾಕಾರ್ಯಕರ್ತೆ,ಅಮರ ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ, ಎಲ್.ಸಿ.ಆರ್.ಪಿಗಳು, ಪಶುಸಖಿ,ಕೃಷಿ ಸಖಿ ಹಾಗೂ ವಾರ್ಡ್ ಪದಾಧಿಕಾರಿಗಳು ಭಾಗವಹಿಸಿದ್ದರು. ಲಘು ಉಪಹಾರವನ್ನು ಪಶುಸಖಿ ಚೈತನ್ಯ ಹಾಗೂ ಅಂಗನವಾಡಿ ಕಾರ್ಯಕರ್ತೆ ಚಂದ್ರಾವತಿ ಇವರು ನೀಡಿ ಸಹಕರಿಸಿದರು.