ಪಂಜ ಗ್ರಾಮ ಪಂಚಾಯತ್ 2023-24 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಸೆ.15 ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಗ್ರಾಮ ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಕ್ರಮ, ಪಂಜ ಕ್ಕೆ ಪ್ರತ್ಯೇಕ ವಿದ್ಯುತ್ ಪೀಡರ್ ನಿರ್ಮಿಸುವಂತೆ, ತ್ಯಾಜ್ಯ ವಿಲೇವಾರಿ , ಗ್ರಾಮ ಪಂಚಾಯತ್ ನಲ್ಲಿ ವಾಡ್ಸಪ್ ಗ್ರೂಪ್ ರಚನೆ, ಸರಕಾರಿ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲು, ಪಲ್ಲೋಡಿಯಲ್ಲಿ ಪೋಲೀಸ್ ಠಾಣೆಗೆ ಕಾದಿರಿಸಿದ ಜಾಗ ಬಳಸುವ ಕುರಿತು, ಪೋಸ್ಟ್ ಆಫೀಸ್ ಗೆ ಕಾದಿರಿಸಿದ ಜಾಗದ ಕುರಿತು,ಬೆಳೆ ಸಮೀಕ್ಷೆ ಇಲಾಖೆಯಿಂದ ಆಗಲಿ, ಕೂತ್ಕುಂಜ ಗ್ರಾಮದ ಸರಕಾರಿ ಜಾಗ ಪಂಚಾಯತ್ ಉಪಯೋಗಿಸಲು, ಜೆ.ಜೆ.ಯಂ ಯೋಜನೆಗೆ ಇನ್ನಷ್ಟು ಬೇಡಿಕೆ ಮೊದಲಾದ ವಿಚಾರಗಳ ಕುರಿತು ಬೇಡಿಕೆ ಮತ್ತು ಚರ್ಚೆಗಳು ನಡೆಯಿತು.
ಪಿ.ಎಮ್.ಪೋಷಣ್ ಯೋಜನೆ ಸಹಾಯಕ ನಿರ್ದೇಶಕಿ
ಶ್ರೀಮತಿ ವೀಣಾ ನೋಡೆಲ್ ಅಧಿಕಾರಿಯಾಗಿ ಪಾಲ್ಗೊಂಡಿದ್ದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಜಳಕದಹೊಳೆ ಸಭಾಧ್ಯಕ್ಷತೆ ವಹಿಸಿದ್ದರು.ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಚಂದ್ರಾವತಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಾರಾಯಣ ಕೃಷ್ಣನಗರ ಸದಸ್ಯರಾದ ಶ್ರೀಮತಿ ಪೂರ್ಣಿಮಾ ದೇರಾಜೆ, ಶ್ರೀಮತಿ ನೇತ್ರಾವತಿ ಕಲ್ಲಾಜೆ, ಶ್ರೀಮತಿ ವೀಣಾ, ಲಕ್ಷ್ಮಣ ಗೌಡ ಬೊಳ್ಳಾಜೆ, ಶ್ರೀಮತಿ ದಿವ್ಯಾ ಪುಂಡಿಮನೆ , ಜಗದೀಶ್ ಪುರಿಯ, ಶ್ರೀಮತಿ ಪ್ರಮೀಳ ಸಂಪ, ಶ್ರೀಮತಿ ಮಲ್ಲಿಕಾ ಅಳ್ಪೆ,ಚಂದ್ರಶೇಖರ ದೇರಾಜೆ, ಶರತ್ ಕುದ್ವ, ಲಿಖಿತ್ ಪಲ್ಲೋಡಿ, ವಿವಿಧ ಇಲಾಖೆಗಳ ಅಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಚಂದ್ರಾವತಿ ಸ್ವಾಗತಿಸಿದರು ಕಾರ್ಯದರ್ಶಿ ಗೋಪಾಲಕೃಷ್ಣ ವರದಿ ವಾಚಿಸಿದರು. ಗ್ರಾಮ ಪಂಚಾಯತ್ ಸದಸ್ಯ ಲಿಖಿತ್ ಪಲ್ಲೋಡಿ ವಂದಿಸಿದರು.