ಸುಳ್ಯ ತಾಲೂಕು ಪಂಚಾಯತ್ ನಲ್ಲಿ ಸಹಾಯಕ ಲೆಕ್ಕಾಧಿಕಾರಿಯಾಗಿದ್ದು ನಿವೃತ್ತರಾಗಿದ್ದ ಶ್ರೀಮತಿ ಮಾಲತಿಯವರು ಸೆ.16 ರಂದು ಮುಂಜಾನೆ ನಿಧನರಾದರು.
ಅಜ್ಜಾವರ ಗ್ರಾಮ ಪಂಚಾಯತ್ ನಿವಾಸಿ ಜನಾರ್ದನ ವಾಗ್ಲೆಯವರ ಪತ್ನಿಯಾಗಿರುವ ಇವರು ಸುಧೀರ್ಘ ಕಾಲ ಸರಕಾರ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ವಯೋಸಹಜ ಅಸೌಖ್ಯಕ್ಕೊಳಗಾಗಿದ್ದ ಇವರು ಚಿಕಿತ್ಸೆ ಪಡೆಯುತ್ತಿದ್ದರೂ ಫಲಕಾರಿಯಾಗದೇ ಸೆ.16 ರಂದುಮುಂಜಾನೆ ಆಸ್ಪತ್ರೆಯಲ್ಲಿ ನಿಧನರಾದರೆಂದು ತಿಳಿದುಬಂದಿದೆ.