ಭಜನಾ ಕಾರ್ಯಕ್ರಮ, ಸಾರ್ವಜನಿಕರಿಗೆ ವಿವಿಧ ಸ್ಪರ್ಧೆ, ಸಭಾ ಕಾರ್ಯಕ್ರಮ, ಶೋಭಾಯಾತ್ರೆ
ಸಂಜೆ ಅರುಣ್ ಕುಮಾರ್ ಪುತ್ತಿಲರವರಿಂದ ಧಾರ್ಮಿಕ ಉಪನ್ಯಾಸ
ನೆಲ್ಲೂರು ಕೆಮ್ರಾಜೆ ಯುವಕ ಮಂಡಲದ ವತಿಯಿಂದ 44ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮವು ಸೆ.19ರಂದು ಸ.ಹಿ.ಪ್ರಾ.ಶಾಲೆ ನಾರ್ಣಕಜೆಯ ವಠಾರದಲ್ಲಿ ನಡೆಯಲಿದೆ. ಬೆಳಿಗ್ಗೆ ಸ್ಥಳ ಶುದ್ಧಿ, ಗಣಪತಿ ಹವನ, ಗಣಪತಿ ಪ್ರತಿಷ್ಠಾಪನೆ ನಡೆಯಲಿದೆ. ಬಳಿಕ ದುರ್ಗಾಶ್ರೀ ಭಜನಾ ಮಂಡಳಿ ನಾರ್ಣಕಜೆ, ನಾಗಶ್ರೀ ಭಜನಾ ಮಂಡಳಿ ದಾಸನಕಜೆ ಮತ್ತು ಶ್ರೀ ಮಂಜುನಾಥ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಅಲ್ಲದೇ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳು, ಮನೋರಂಜನಾ ಕಾರ್ಯಕ್ರಮ ಗಳು ನಡೆಯಲಿದೆ. ಮಧ್ಯಾಹ್ನ 12ರಿಂದ ಶ್ರೀ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ 3 ಗಂಟೆಯಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಪುತ್ತೂರಿನ ಭಜರಂಗದಳ ಜಿಲ್ಲಾ ಮಾಜಿ ಸಂಯೋಜಕ ಅರುಣ್ ಕುಮಾರ್ ಪುತ್ತಿಲ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಸಭಾ ಕಾರ್ಯಕ್ರಮ ದ ಅಧ್ಯಕ್ಷೆಯನ್ನು ನೆಲ್ಲೂರು ಕೆಮ್ರಾಜೆ ಯುವಕ ಮಂಡಲದ ಅಧ್ಯಕ್ಷ ಕೌಶಿಕ್ ಸುಳ್ಳಿ ವಹಿಸಲಿದ್ದಾರೆ. ಮಾಜಿ ಸಚಿವರಾದ ಎಸ್.ಅಂಗಾರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಧನಂಜಯ ಕುಮಾರ್ ಕೋಟೆಮಲೆ ಗೌರವ ಉಪಸ್ಥಿತಿ ಇರಲಿದ್ದಾರೆ. ಬಳಿಕ ಜಬಳೆ ಎಲಿಮಲೆ ಮಾರ್ಗವಾಗಿ ಶೋಭಾಯಾತ್ರೆ ನಡೆದು ನಾರ್ಣಕಜೆ ಯಲ್ಲಿ ಜಲಸ್ತಂಭನ ನಡೆಯಲಿದೆ.