ಜ್ಞಾನ ದೀಪ ವಿದ್ಯಾ ಸಂಸ್ಥೆ ಎಲಿಮಲೆಯಲ್ಲಿ ಇಲಾಖಾ ತಾಲೂಕು ಮಟ್ಟದವಿಜ್ಞಾನ ನಾಟಕ ಸ್ಪರ್ಧೆ

0

   ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆ  ಇದರ ಆಶ್ರಯದಲ್ಲಿ ಸುಳ್ಯ ತಾಲೂಕು ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ ಸೆ.16ರಂದು ನಡೆಯಿತು.  ಉದ್ಘಾಟನೆಯನ್ನು ಸುಳ್ಯ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ  ರಮೇಶ್ ಬಿ. ಈ. ನೆರವೇರಿಸಿದರು. ಜ್ಞಾನದೀಪ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಚಂದ್ರಶೇಖರ ಭಟ್ ತಳೂರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶ್ರೀಮತಿ ಸಂಧ್ಯಾ ಕುಮಾರಿ ಶಿಕ್ಷಣ ಸಂಯೋಜಕರಾದ ಪಂಜ ವಲಯ, ಶ್ರೀಮತಿ ನಳಿನಿ ಶಿಕ್ಷಣ ಸಂಯೋಜಕರು, ಗುತ್ತಿಗಾರು ವಲಯ, ಜ್ಞಾನದೀಪ ವಿದ್ಯಾ ಸಂಸ್ಥೆಯ ನಿರ್ದೇಶಕರಾದ ರಾಧಾಕೃಷ್ಣ ಮಾವಿನ ಕಟ್ಟೆ, ತೀರ್ಪುಗಾರರಾದ 

ಗೋಪಾಲಕೃಷ್ಣ ಪ್ರೌಢಶಾಲೆ, ಬಿಳಿನೆಲೆಯ ನಿವೃತ್ತ ಶಿಕ್ಷಕರಾದ
ದುರ್ಗಪ್ಪ ಮಾಸ್ತರ್ ಕುಳ್ಳಂಪಾಡಿ,
ನೆಹರು ಮೆಮೋರಿಯಲ್ ಕಾಲೇಜು ಅರಂತೋಡು ಇಲ್ಲಿಯ ನಿವೃತ್ತ ಮುಖ್ಯೋಪಾಧ್ಯಾಯರಾದ ಆನಂದ, ಹಾಗೂ ಕೆ.ಪಿ.ಎಸ್ ಬೆಳ್ಳಾರೆ ಇಲ್ಲಿಯ ವಿಜ್ಞಾನ ಶಿಕ್ಷಕರಾದ ದಿನೇಶ್ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಗದಾಧರ ಬಾಳುಗೋಡು ಸ್ವಾಗತಿಸಿದರು, ಶಾಲಾ ಶಿಕ್ಷಕಿ ಗೌತಮಿ ವಂದಿಸಿದರು, ಶಿಕ್ಷಕರಾದ ಪುನೀತ್ ರವಿ ಹಾಗೂ ಶಿಕ್ಷಕಿ ಪಲ್ಲವಿ ಕಾರ್ಯಕ್ರಮ ನಿರೂಪಿಸಿದರು. ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ, ದ್ವಿತೀಯ ಸ್ಥಾನವನ್ನು ಸರಕಾರಿ ಪ್ರೌಢಶಾಲೆ ಎಣ್ಮೂರು ಹಾಗೂ ತೃತೀಯ ಸ್ಥಾನವನ್ನು ವಿದ್ಯಾ ಬೋಧಿನಿ ಪ್ರೌಢಶಾಲೆ ಬಾಳಿಲ ಪಡೆದುಕೊಂಡವು.