ಕರಿಕ್ಕಳ ನಿಡ್ವಾಳ ಶ್ರೀ ಮಹಾವಿಷ್ಣು ದೇವರ ಸನ್ನಿಧಿಯಲ್ಲಿ ಕು.ಸುಮಾ ಕೋಟೆ ಇವರು ಹಾಡಿರುವ ಶ್ರೀ ವಿಷ್ಣು ಸಹಸ್ರನಾಮ ಧ್ವನಿ ಸುರುಳಿ ಬಿಡುಗಡೆ ಸೆ 16 ರಂದು ನಡೆಯಿತು. ಪ್ರಗತಿಪರ ಕೃಷಿಕ ದಯಾನಂದ ಕೋಟೆ ದೀಪ ಬೆಳಗಿಸಿದರು. ಯೋಗ ಗುರು ಗಣಪಯ್ಯ ವನ್ಯಶ್ರೀ ಪೆರುವಾಜೆ ಧ್ವನಿ ಸುರಳಿ ಬಿಡುಗಡೆ ಮಾಡಿ ಶ್ರೀ ವಿಷ್ಣು ಸಹಸ್ರನಾಮ ಮಹತ್ವವನ್ನು ತಿಳಿಸಿ ಶುಭಕೋರಿದರು.
ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಪ್ರಕಾಶ್ ಕಂಬಳ , ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ನೇಮಿರಾಜ ಪಲ್ಲೋಡಿ ರವರು ಕು. ಸುಮಾ ಕೋಟೆಯವರನ್ನು ಅಭಿನಂದಿಸಿ ಶುಭ ಕೋರಿದರು. ಕು.ಸುಮಾಕೋಟೆಯವರನ್ನು ಶ್ರೀಮತಿ ಹಂಸಾವತಿ ಕಂಬಳ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಮಹೇಶ್ ಕೋಟೆ, ರಮೇಶ್ ಕೋಟೆ, ಕೋಟೆ ಕುಟುಂಬಸ್ಥರು, ದೇವಸ್ಥಾನದ ಭಕ್ತ ವೃಂದದವರು ಉಪಸ್ಥಿತರಿದ್ದರು.