ಅರಂತೋಡಿನಲ್ಲಿ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಉದ್ಘಾಟನೆ

0

ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಅರಂತೋಡಿನಲ್ಲಿ ಜ.17 ರಂದು ಉದ್ಘಾಟನೆಗೊಂಡಿತು.

ಅರಂತೋಡಿನ ಬ್ಯಾಂಕ್ ಆಫ್ ಬರೋಡಾದ ಹತ್ತಿರದ ಗಿರಿಜಾ ಕಾಂಪ್ಲೆಕ್ಸ್ ನಲ್ಲಿ ಜನೌಷಧಿ ಕೇಂದ್ರ ಶುಭಾರಂಭ ಗೊಂಡಿದ್ದು ನಿವೃತ್ತ ಮುಖ್ಯೋಪಾಧ್ಯಾಯರಾದ ಜತ್ತಪ್ಪ ಗೌಡ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅರಂತೋಡು ಗ್ರಾ.ಪಂ ಅಧ್ಯಕ್ಷ ಕೇಶವ ಅಡ್ತಲೆ, ಅರಂತೋಡು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸಂತೋಪ್ ಕುತ್ತಮೊಟ್ಟೆ, ಪಿಡಿಒ ಜಯಪ್ರಕಾಶ್, ಜನೌಷಧಿ ಕೇಂದ್ರದ ಶಿವರಂಜನ್ ಮತ್ತಿತರರು ಉಪಸ್ಥಿತರಿದ್ದರು