ವಿವಾಹ ಸಮಾರಂಭದಲ್ಲಿ ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣದ ಬಗ್ಗೆ ಜಾಗೃತಿ ಕಾರ್ಯಕ್ರಮ

0

ಮಾದರಿಯಾದ ಮದುಮಗ

ಸುಳ್ಯ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಇಲಾಖೆಯಲ್ಲಿ ಮಾಹಿತಿಗಾರರಾಗಿ ಸೇವೆ ಸಲ್ಲಿಸುತ್ತಿರುವ ಕಮಾಲುದ್ದೀನ್ ರವರು ತಮ್ಮ ವಿವಾಹ ಸಮಾರಂಭದಲ್ಲಿ ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿ ಮಾದರಿ ವಿವಾಹ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದಾರೆ.

ಪುತ್ತೂರು ಪರ್ಪುಂಜದ ಅಬ್ರೋಡ್ ಆಡಿಟೋರಿಯಮ್ ನಲ್ಲಿ ಕಮಾಲುದ್ದೀನ್ ರವರು ಸುಳ್ಯದ ನಾವೂರು ನಿವಾಸಿ ಫಾತಿಮತ್ ಫರೀದಾರೊಂದಿಗೆ ಸೆಪ್ಟೆಂಬರ್ 17ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ಈ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ತರಬೇತುದಾರ ರಫೀಕ್ ಮಾಸ್ಟರ್ ಮಂಗಳೂರು ಭಾಗವಹಿಸಿ ಕಾರ್ಯಗಾರವನ್ನು ನಡೆಸಿದ್ದಾರೆ.
ಧಾರ್ಮಿಕ ಸಂಘಟನೆಯ ಮುಖಂಡರುಗಳಾದ ಡಾ.ಅಬ್ದುಲ್ ರಶೀದ್ ಝೈನಿ,ಎಸ್ ಬಿ ಧಾರಿಮಿ ಮೊದಲಾದ ನೇತಾರರು ವಿವಾಹ ಸಂದರ್ಭದಲ್ಲಿ ಭಾಗವಹಿಸಿ ಈ ಕಾರ್ಯಕ್ರಮದ ಕುರಿತು ಮಾತನಾಡಿ ಶ್ಲಾಘನೆ ವ್ಯಕ್ತಪಡಿಸಿ ವಧು ವರರಿಗೆ ಶುಭ ಹಾರೈಕೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರುಗಳಾದ ಮುಡಿಪು ಮಜ್ಲಿಸ್ ಸ್ಥಾಪಕ ಅಸಯ್ಯದ್ ಅಶ್ರಪ್ ತಂಗಳ್, ಹಾಜಿ ಮುಸ್ತಫ ಜನತಾ ಸುಳ್ಯ, ಆದಂ ಹಾಜಿ ಕಮ್ಮಾಡಿ, ಇಬ್ರಾಹಿಂ ಹಾಜಿ ಕತ್ತಾರ್ ಮಂಡೆಕೋಲು, ಹಾಜಿ ಪಿ.ಎ .ಮಹಮ್ಮದ್, ಅಡ್ವಕೇಟ್ ಅಬೂಬಕರ್ ಅಡ್ಕಾರ್, ಇಬ್ರಾಹಿಂ ಸಕಾಫಿ ಪುಂಡುರು, ಅಬ್ದುಲ್ ಮಜೀದ್ ಜನತಾ ಮೊದಲಾದವರು ಉಪಸ್ಥಿತರಿದ್ದರು.