ಸುಳ್ಯ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ವಾರ್ಷಿಕ ಮಹಾಸಭೆ- ಹೊಸ ನೇಮಕಾತಿಗೆ ಸದಸ್ಯರ ಒತ್ತಾಯ

0

ಸುಳ್ಯ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಇದರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಪ್ರಭಾಕರ ನಾಯಕ್ ರವರ ಅಧ್ಯಕ್ಷತೆಯಲ್ಲಿ ಸೆ. 15 ರಂದು ಸಿ.ಎ.ಬ್ಯಾಂಕಿನಲ್ಲಿ ನಡೆಯಿತು.

ಆರಂಭದಲ್ಲಿ ಅಗಲಿದ ಸಂಘದ ಸದಸ್ಯರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ಆರ್ಥಿಕ ವರ್ಷದಲ್ಲಿ ಎ.ತರಗತಿಯ ಸದಸ್ಯರು 3958 ಮಂದಿ, ಬಿ. ತರಗತಿಯ 4497 ಸದಸ್ಯರು ಇದ್ದಾರೆ. ಪಾಲು ಬಂಡವಾಳ ಜುಮ್ಲಾ 1.50 ಕೋಟಿ ಹೊಂದಿದೆ.
ಸಾಲ ವಸೂಲಾತಿ ಶೇ. 50.62%, ವರ್ಷಾಂತ್ಯಕ್ಕೆ ನಿರಖು ಠೇವಣಿ 1684 ಕೋಟಿ ಉಳಿತಾಯ ಖಾತೆಯಲ್ಲಿ 64.56 ಲಕ್ಷ ರೈತ ಸಂಜೀವಿನಿ ಠೇವಣಿ 119 ಲಕ್ಷ ಹೊಂದಿದೆ. ಪ್ರಸಕ್ತ ನಿವ್ವಳ ಲಾಭ 2.87 ಲಕ್ಷ ಹೊಂದಿದೆ. ಒಟ್ಟು ವ್ಯವಹಾರ 4.24 ಕೋಟಿ ಹೊಂದಿದೆ.

ಮಹಾಸಭೆಯ ನೋಟಿಸಿನೊಂದಿಗೆ ವರದಿ ಪುಸ್ತಕ ಅಂಚೆ ಮೂಲಕ ಸದಸ್ಯರಿಗೆ ಕಳುಹಿಸುವ ವ್ಯವಸ್ಥೆ ಮಾಡಿದರೆ ಒಳ್ಳೆಯದು. ವರದಿ ಅವಲೋಕಿಸಲು ಸಮಯ ಸಾಕಾಗುವುದಿಲ್ಲ ಎಂದು ರಾಧಾಕೃಷ್ಣ ಕೋಟೆ ತಿಳಿಸಿದರು.
ಸಂಘದಲ್ಲಿ ಸುಮಾರು 3900 ಮಂದಿ ಸದಸ್ಯರಿದ್ದು ಎಲ್ಲರಿಗೂ ವರದಿಯನ್ನು ಅಂಚೆ ಮೂಲಕ ಕಳುಹಿಸುವ ವ್ಯವಸ್ಥೆಯಿಂದ ಸಂಘಕ್ಕೆ ಹೊರೆಯಾಗುವುದು ಎಂದು ಉಮೇಶ್ ಪಿ.ಕೆ ಅಭಿಪ್ರಾಯ ವ್ಯಕ್ತಪಡಿಸಿದರು.
ವ್ಯವಹಾರ ಹೊಂದಿರುವ
ಅರ್ಹ ಸದಸ್ಯರಿಗೆ ಮಾತ್ರ ಕಳುಹಿಸುವ ವ್ಯವಸ್ಥೆ ಮಾಡಬೇಕೆಂದು ಶೈಲೇಶ್ ಹೇಳಿದರು.

ವರದಿಯನ್ನು ಅಂಚೆ ಮೂಲಕ ಪುಸ್ತಕ ಕಳುಹಿಸಲು ಅಸಾಧ್ಯದ ಮಾತು. ಬದಲಾಗಿ ಸಾಮಾಜಿಕ ಜಾಲತಾಣದ ಮೂಲಕ ವರದಿಯನ್ನು ಅಪ್ಲೋಡ್ ಮಾಡುವಂತಹ ವ್ಯವಸ್ಥೆ ಮಾಡಬೇಕು ಅಥವಾ ಸಂಘದ ಹೆಸರಿನಲ್ಲಿ ವೆಬ್ಸೈಟ್ ತೆರೆಯುವಂತ ವ್ಯವಸ್ಥೆ ಮಾಡಿದರೆ ಒಳ್ಳೆಯದು ಎಂದು ಗಣೇಶ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು.

ವ್ಯವಹಾರಿಕವಾಗಿ ವರದಿಯನ್ನು ಪರಿಶೀಲಿಸಬೇಕಾದರೆ ಸಮಯ ಬೇಕಾಗುತ್ತದೆ. ವರದಿ ಸದಸ್ಯರಿಗೆ ಮುಂಚಿತವಾಗಿ ಸಿಗಬೇಕು ಎಂದು ರತ್ನಾಕರ ಬಳ್ಳಡ್ಕ ರವರು ತಿಳಿಸಿದರು.

ಕೃಷಿ ಸಾಲದ ಅವಧಿಯನ್ನು ವಿಸ್ತರಣೆ ಮಾಡುವಂತೆ ವಿಷ್ಣು ಭಟ್ ಸಲಹೆ ನೀಡಿದರು. ಸಂಘದಲ್ಲಿರುವ ಬಿ.ಕ್ಲಾಸ್ ಸಿ. ಕ್ಲಾಸ್ ತರಗತಿಯ ಸದಸ್ಯತನವನ್ನು ರದ್ದುಗೊಳಿಸಿ ಕ್ಷೇಮ ನಿಧಿಗೆ ವರ್ಗಾವಣೆ ಮಾಡಬೇಕು ಎಂದು ರಾಧಾಕೃಷ್ಣ ಕೋಟೆ ಸಲಹೆ ನೀಡಿದರು.

ಸ್ವಂತ ಬಂಡವಾಳದಿಂದ ಸಾಲ ವಿತರಿಸಲು ಕೇಂದ್ರ ಸರಕಾರದ ಮಾರ್ಗಸೂಚಿ ಅನುಸರಿಸಬೇಕಾಗಿಲ್ಲ ಆಡಳಿತ ಮಂಡಳಿ ತೀರ್ಮಾನ ತೆಗೆದುಕೊಳ್ಳಬಹುದು ಎಂದು ಶೈಲೇಶ್ ತಿಳಿಸಿದರು.
ಸಂಘದಲ್ಲಿ ದೀರ್ಘಾವಧಿ ಸಾಲ ಹೆಚ್ಚು ಕೊಡಬೇಕು ಕ್ಲಪ್ತ ಸಮಯದಲ್ಲಿ ಸಾಲ ವಸೂಲು ಮಾಡಿದರೆ ಲಾಭಾಂಶ ಜಾಸ್ತಿ ಬರುವುದು. ಆಡಳಿತ ಮಂಡಳಿಯ ಅಧ್ಯಕ್ಷರ ಅವಧಿ ಪೂರ್ಣಗೊಳ್ಳುವ ಮೊದಲು ಅಧ್ಯಕ್ಷ ಉಪಾಧ್ಯಕ್ಷರ ಬದಲಾವಣೆ ಯಾಕೆ ಮಾಡಲಾಗಿದೆ ಸ್ಪಷ್ಟೀಕರಣ ನೀಡುವಂತೆ ರತ್ನಾಕರ ಬಳ್ಳಡ್ಕ ರವರು ಪ್ರಶ್ನಿಸಿದರು.

ಅನಾರೋಗ್ಯ ಕಾರಣದಿಂದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಒಪ್ಪಿಗೆ ಮೇರೆಗೆ ಬದಲಾವಣೆ ಮಾಡಲಾಗಿದೆ. ಬೇರೆ ಯಾವುದೇ ರೀತಿಯ ಗೊಂದಲಗಳಿಲ್ಲ ಎಂದು ವಿಶ್ವನಾಥ ಬಿಳಿಮಲೆ ಯವರು ತಿಳಿಸಿದರು. ಹಿಂದಿನ ವರದಿಯಲ್ಲಿ ಅಧ್ಯಕ್ಷರ ಹೆಸರು ಹಾಗೂ ಮುಂದಿನ ವರದಿ ಸಾಲಿಗೆ ನೂತನ ಅಧ್ಯಕ್ಷರ ಹೆಸರನ್ನು ನಮೂದಿಸಬೇಕು ಯಾವ ಯಾವ ಅವಧಿಯಲ್ಲಿ ಅಧ್ಯಕ್ಷರು ಯಾರು ಇರುತ್ತಾರೊ ಅವರ ಹೆಸರು ನಮೂದಿಸುವಂತೆ ಶ್ರೀಪತಿ ಭಟ್ ಮಜಿಗುಂಡಿ ಸಲಹೆ ನೀಡಿದರು.

ಸಾಲ ವಸೂಲಾತಿಗೆ ಕಾನೂನಿನ ತೊಡಗಿರುವ ಬಗ್ಗೆ ಹೇಳಿದಿರಿ ನಿರ್ದೇಶಕರಾಗಿ ಶಾಸಕರಿದ್ದಾರೆ ಅವರ ಮುಖಾಂತರ ಸಂಬಂಧಿಸಿದ ಇಲಾಖೆಯ ಗಮನಕ್ಕೆ ತರುವಂತ ವ್ಯವಸ್ಥೆಯನ್ನು ಮಾಡಬೇಕು ಆ ಮೂಲಕ ಕಾನೂನು ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ರಾಧಾಕೃಷ್ಣ ಕೋಟೆಯವರು ಸಲಹೆ ನೀಡಿದರು.
ಸಾಲ ವಸೂಲಾತಿಗೆ ಈಗಾಗಲೇ ಏನು ಕ್ರಮ ಕೈಗೊಳ್ಳಲಾಗಿದೆ ಸಾಲಗಾರರನ್ನ ಮನವೊಲಿಸಿ ಸಮಸ್ಯೆ ಬಗ್ಗೆ ತಿಳಿದುಕೊಂಡು ಮರು ಪಾವತಿಗೆ ಮಾಡುವಂತೆ ಪ್ರಯತ್ನಿಸಬೇಕು ಎಂದು ಡಾ. ಜ್ಞಾನೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಘದಲ್ಲಿ ಖಾಯಂ ನೌಕರರ ಸಂಖ್ಯೆ ಕಡಿಮೆ ಇದ್ದು ಕೇವಲ ಒಬ್ಬರು ಇದ್ದಾರೆ. ಬಾಕಿ ಉಳಿದವರೆಲ್ಲರೂ ಅರೆಕಾಲಿಕ ನೌಕರರಾಗಿ ಕರ್ತವ್ಯವನ್ನು ಮಾಡುತ್ತಿದ್ದಾರೆ. ಸಂಘದಲ್ಲಿ ಏನಾದರೂ ವ್ಯತ್ಯಾಸಗಳಾದಲ್ಲಿ ಜವಾಬ್ದಾರಿ ಯಾರು ಹೊಣೆ ಯಾರು?
ಸಿಸಿಎ ಪತ್ರ ಬರೆದು ಹೊಸ ನೇಮಕಾತಿಯನ್ನು ಮಾಡುವ ಬಗ್ಗೆ ಆಡಳಿತ ಮಂಡಳಿ ನಿರ್ಣಯ ತೆಗೆದುಕೊಳ್ಳಬೇಕೆಂದು ರಾಧಾಕೃಷ್ಣ ಕೋಟೆ ಸಲಹೆ ಒತ್ತಾಯಿಸಿದರು.
ಪ್ರತಿ ಸಾಲದ ವಿವರದಲ್ಲಿ ಸುಸ್ತಿ ಬಾಕಿಯ ವಿವರವನ್ನು ಪ್ರತ್ಯೇಕವಾಗಿ ವರದಿಯಲ್ಲಿ ನಮೂದಿಸಬೇಕು ಎಂದು ರತ್ನಾಕರ ಬಳ್ಳಡ್ಕ ತಿಳಿಸಿದರು.

ಸುಸ್ತಿ ಬಾಕಿಯಲ್ಲಿ ಬಡ್ಡಿ ರಿಯಾಯಿತಿ ಮಾಡುವ ಬಗ್ಗೆ ಸಾಮೂಹಿಕ ನಿರ್ಣಯ ಗುರುತಿಸಿ ಕಡಿತ ಮಾಡುವ ನಿರ್ಣಯ ಮಾಡಬೇಕು ಎಂದು ವಿನಯ ಕುಮಾರ್ ಕಂದಡ್ಕ ಹೇಳಿದರು.
ಸಂಘದ ಕಟ್ಟಡದ ಎದುರುಗಡೆ ವಾಹನ ಸವಾರರು ಅಡ್ಡಾದಿಡ್ಡಿ ಪಾರ್ಕ್ ಮಾಡುವುದರಿಂದ ವ್ಯವಹಾರ ಮಾಡಲು ಬರುವಂತಹ ಗ್ರಾಹಕರಿಗೆ ತೊಂದರೆಯಾಗುತ್ತಿದೆ ಈ ಬಗ್ಗೆ ಆಡಳಿತ ಮಂಡಳಿ ಗಮನಹರಿಸಿ ವ್ಯವಸ್ಥಿತ ರೀತಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಹಾಗೂ ಸ್ವಚ್ಛತೆಯನ್ನು ಪಾಲಿಸಬೇಕೆಂದು ಎ.ಟಿ ಕುಸುಮಾದರ ಸಲಹೆ ನೀಡಿದರು.

ಸಾಲ ವಸೂಲಾತಿಗೆ ತಂಡ ರಚಿಸಿಕೊಂಡು ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರನ್ನು ಸೇರಿಸಿಕೊಂಡು ಬಾಕಿ ಇರುವಂತ ಸಂಘದ ಸದಸ್ಯರ ಮನೆಗೆ ಹೋಗಿ ಅವರನ್ನು ಮನವೊಲಿಸಿ ಸಾಲ ಮರುಪಾವತಿ ಮಾಡುವ ರೀತಿಯಲ್ಲಿ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗುತ್ತಿದೆ. ಖಾಯಂ ಸಿಬ್ಬಂದಿಯ ನೇಮಕಾತಿಯ ಬಗ್ಗೆ ಆದೇಶ ಬಾರದಿರುವುದರಿಂದ ಹೊಸ ನೇಮಕಾತಿ ಮಾಡಲು ಬರುವುದಿಲ್ಲ. ಆಡಳಿತ ಮಂಡಳಿಯ ಸಭೆಯಲ್ಲಿ ತೀರ್ಮಾನಿಸಿ ಪತ್ರ ಬರೆಯುವ ತೀರ್ಮಾನವನ್ನು ಕೈಗೊಳ್ಳಲಾಗುವುದು. ಮುಂದಿನ ಅವಧಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ವರದಿಯ ಪ್ರತಿಯನ್ನು ಕಳುಹಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.
ವೇದಿಕೆಯಲ್ಲಿ
ಸಂಘದ ಉಪಾಧ್ಯಕ್ಷ ಸೋಮನಾಥ ಕೆ, ಕೋಶಾಧಿಕಾರಿ ಶ್ರೀಮತಿ ಸುವರ್ಣಿನಿ ಎಂ ಎಸ್, ನಿರ್ದೇಶಕರಾದ ವಿಶ್ವನಾಥ ಬಿಳಿಮಲೆ, ರಮೇಶ್ ಪಿ, ಮಹಾವೀರ ಬಿ, ಚಂದ್ರಶೇಖರ್ ರೈ, ದೇವಮ್ಮ ಎಸ್,
ಕು. ಭಾಗೀರಥಿ ಮುರುಳ್ಯ, ಶೇಷಪ್ಪ ಪಿ, ಭಗೀರಥ ಕೋಲ್ಚಾರು ಉಪಸ್ಥಿತರಿದ್ದರು.
ಸಂಘದ ವ್ಯವಸ್ಥಾಪಕಿ ಶ್ರೀಮತಿ ಉಷಾ ಸುವರ್ಣ ವರದಿ ವಾಚಿಸಿದರು.ಸಿಬ್ಬಂದಿ ವರ್ಗದವರು ಸಹಕರಿಸಿದರು.