ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

0


ನಿವ್ವಳ ಲಾಭ 37.27ಲಕ್ಷ, ಶೇ. 6% ಡಿವಿಡೆಂಟ್ ಘೋಷಣೆ

ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಕರುಣಾಕ ಹಾಸ್ಪಾರೆ ಯವರ ಅಧ್ಯಕ್ಷತೆಯಲ್ಲಿ ಸಂಘದ ಸಭಾಭವನದಲ್ಲಿ ಸೆ. 16ರಂದು ನಡೆಯಿತು.

ಆರಂಭದಲ್ಲಿ ಅಗಲಿದ ಸಂಘದ ಸದಸ್ಯರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ಸಂಘದಲ್ಲಿ ಪ್ರಸ್ತುತ 2910 ಮಂದಿ ಎ ತರಗತಿ ಸದಸ್ಯರನ್ನು ಹೊಂದಿದೆ.3.86 ಕೋಟಿ ಪಾಲು ಬಂಡವಾಳ ಕ್ರೋಢಿಕರಿಸಿದ್ದು ಹೊರಬಾಕಿ ಸಾಲ 33.55 ಕೋಟಿ, ಠೇವಣಿ ವರ್ಷಾಂತ್ಯಕ್ಕೆ 22.92 ಕೋಟಿ ಆಗಿರುತ್ತದೆ.ದುಡಿಯುವ ಬಂಡವಾಳ 45.30 ಕೋಟಿ ಇರುವುದು. ಪ್ರಸಕ್ತ ಸಾಲಿನಲ್ಲಿ 35.39 ಕೋಟಿ ಸಾಲ ವಿತರಿಸಲಾಗಿದೆ. ವರದಿ ಸಾಲಿನಲ್ಲಿ 37,27,891/- ಲಕ್ಷ ಲಾಭ ಗಳಿಸಿದ್ದು ಶೇ‌6 ಡಿವಿಡೆಂಟ್ ನೀಡಲಾಗಿದೆ.

ಸಂಘದ ಸದಸ್ಯರ ನಿಷ್ಕ್ರಿಯಗೊಂಡಿರುವ ಖಾತೆಗಳನ್ನು ರದ್ದುಪಡಿಸುವಂತೆ ಆದೇಶಿಸಲಾಗಿದೆ ಎಷ್ಟು ವರ್ಷಗಳಿಂದ ಈ ಪ್ರಕ್ರಿಯೆ ನಡೆಯುತ್ತಿದೆ ಎಂದು ದೇವಪ್ಪ ನಾಯ್ಕ್ ಪ್ರಶ್ನಿಸಿದರು.

ಒಂದು ವರ್ಷಗಳಿಂದ ವ್ಯವಹಾರವನ್ನು ಮಾಡದೆ ಸ್ಥಗಿತಗೊಳಿಸಿರುವಂತ ಎಸ್ ಬಿ ಖಾತೆಗಳನ್ನು ಅನರ್ಹಗೊಳಿಸಲು ಅವಕಾಶವಿದೆ ಎಂದು ಸುಧಾಮ ಆಲೆಟ್ಟಿ ಹೇಳಿದರು.


ಪಾಲುಮುನಾಫೆ ಶೇಕಡ ಜಾಸ್ತಿ ಮಾಡಬೇಕು. ಅನರ್ಹವಾಗಿರುವ ಖಾತೆಗಳು ಎಷ್ಟು ಇದೆ ಮತ್ತು ಅದರ ಪ್ರಕ್ರಿಯೆ ಏನು ಮಾಡಲಾಗಿದೆ. ಡಿವಿಡೆಂಟ್ ಜಾಸ್ತಿ ಮಾಡಬೇಕು ಕಳೆದ ಬಾರಿಗಿಂತ ಕಡಿಮೆಯಾಗಿದೆ ಲಾಭಾಂಶ ಹೆಚ್ಚು ಮಾಡುವ ಪ್ರಯತ್ನ ಮಾಡಬೇಕು ಎಂದು ಬಾಪೂ ಸಾಹೇಬ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಘಕ್ಕೆ ಸಂಪನ್ಮೂಲದ ಕ್ರೋಡೀಕರಣ ಸಾಲದಲ್ಲಿ ಮಾತ್ರ ಬರುತ್ತಿದ್ದು ಕಮರ್ಷಿಯಲ್ ಆಗಿ ಬರುವಂತೆ ಮಾರ್ಪಾಡು ಮಾಡಬೇಕು ಸಂಘದ ಸ್ವಂತ ಜಾಗದಲ್ಲಿ ಕಮರ್ಷಿಯಲ್ ಕಟ್ಟಡವನ್ನು ಕಟ್ಟಿ ಬಾಡಿಗೆ ರೂಪದಲ್ಲಿ ನೀಡಿದರೆ ಆದಾಯ ಹೆಚ್ಚು ಬರಬಹುದು ಎಂದು ದೇವಪ್ಪ ನಾಯ್ಕ್ ರವರು ಪ್ರಸ್ತಾಪಿಸಿದರು. ಅರಂಬೂರಿನಲ್ಲಿರುವ ಸಂಘದ ಶಾಖೆಯ ಕಟ್ಟಡ ಇರುವ ಜಾಗದಲ್ಲಿ ದಾಖಲೆ ಪತ್ರವಿಲ್ಲದೆ ವಿವಾದಿತ ಜಾಗವೆಂದು ಡಿಸಿ ಅವರು ಆದೇಶಿಸಿದ್ದರು. ಹಿಂದಿನ ಆಡಳಿತ ಮಂಡಳಿಯವರು ಜಾಗದ ವಿಚಾರವಾಗಿ ಕೋರ್ಟ್ ಮೊರೆ ಹೋಗಿದ್ದರು. ಇದರಿಂದಾಗಿ ಸಂಘಕ್ಕೆ ಸಿಗಬೇಕಾದ ಜಾಗ ಸಿಗದೇ ಈಗ ವ್ಯಕ್ತಿ ಸ್ವಾಧೀನ ಪಡಿಸಿಕೊಂಡಿದ್ದಾರೆ. ಇದಕ್ಕೆ ಹಿಂದಿನ ಆಡಳಿತ ಮಂಡಳಿಯವರು ಹೊಣೆಗಾರರು.
20 ಸೆಂಟ್ಸ್ ಜಾಗವನ್ನು ವಿವಾದಿತ ಜಾಗ ಎಂದು ‌ಪರಿಗಣಿಸಲಾಗಿತ್ತು. ಹೈಕೋರ್ಟಿಗೆ ಮುಂದುವರಿದ ಕಾರಣಕ್ಕೆ ಕೈ ತಪ್ಪಿದೆ ಈಗ ಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ಸುಧಾಮ ಅಲೆಟ್ಟಿ ಆರೋಪಿಸಿದರು. ಸುಮಾರು 1. 54 ಎಕ್ರೆ ಸರಕಾರಿ ಜಾಗವಿದ್ದು ಸಾರ್ವಜನಿಕ ಮೀಸಲಿರಿಸಲಾಗಿತ್ತು. ಪಂಚಾಯತ್ ಗೆ 20 ಸೆಂಟ್ಸ್ ಮಂಜೂರು ಆಗಿತ್ತು. ಪಂಚಾಯತ್ ನವರು ಮುತುವರ್ಜಿ ವಹಿಸದೆ ನಿರ್ಲಕ್ಷ್ಯ ವಹಿಸುದ್ದರಿಂದ ಖಾಸಗಿ ವ್ಯಕ್ತಿ ಸ್ವಾಧೀನ ಪಡಿಸಿದ್ದಾರೆ. ತಹಶೀಲ್ದಾರ್ ಬಂದು ಪರಿಶೀಲಿಸಿ‌ ಗುರುತು ಮಾಡಬೇಕು. ತಹಶಿಲ್ದಾರ್ ಆಸಕ್ತಿ ವಹಿಸದ್ದರಿಂದ ಅದು ಮುಂದುವರಿಯಲಿಲ್ಲ. ರಾಜ್ಯ ಹೆದ್ದಾರಿ ಅಗಲೀಕರಣದ ಸಂದರ್ಭ ಈಗ ಇರುವ ಕಟ್ಟಡವು ತೆರವುಗೊಳಿಸಬೇಕಾದ ಸಾಧ್ಯತೆ ಇದ್ದು ಸಂಘಕ್ಕೆ ಸ್ವಂತ ಕಟ್ಟಡಕ್ಕೆ ಪರ್ಯಾಯ ಜಾಗ ಖರೀದಿಸಿ ಅಥವಾ ಸರಕಾರದ ಜಾಗವನ್ನು ಗುರುತಿಸಿಕೊಳ್ಳುವುದು ಸೂಕ್ತ ಎಂದು
ಕೃಪಾಶಂಕರ ತುದಿಯಡ್ಕರವರು ಅಭಿಪ್ರಾಯ ವ್ಯಕ್ತಪಡಿಸಿದರು.

ಸಹಕಾರಿ ಸಂಘದ ಬೈಲಾ ತಿದ್ದುಪಡಿಯ ಆದೇಶಗಳು ಬಂದಿದೆ ಈಗ ಹೊರಡಿಸಿದ ಬೈಲಾದಲ್ಲಿ ಕೆಲವೊಂದು ಅಂಶಗಳನ್ನು ಬದಲಾವಣೆ ಮಾಡಬೇಕೆಂಬ‌ ಆದೇಶ ಬಂದಿದೆ. ಇದರ ಬಗ್ಗೆ ಬೇರೆ ಸಹಕಾರಿ ಸಂಘ ಆಕ್ಷೇಪಣೆ ಸಲ್ಲಿಸಿ ನ್ಯಾಯಾಲಯದ ‌ಮೊರೆ ಹೋಗಿದ್ದಾರೆ. ಪರಿಣಾಮ ಯಾವುದೇ ಬದಲಾವಣೆಯ ಮಾಹಿತಿ ಬಂದಿಲ್ಲ. ಮಹಾ ಸಭೆಯ ತೀರ್ಮಾನ ಸದಸ್ಯರ ಅಭಿಪ್ರಾಯ ತಿಳಿಸುವಂತೆ ಅಧ್ಯಕ್ಷರು ಪ್ರಸ್ತಾಪಿಸಿದರು.

ಡಿಸಿಸಿ ಬ್ಯಾಂಕ್ ಕಮಿಷನ್ ಏಜೆಂಟರಾಗಿ ಸಹಕಾರಿ ಸಂಸ್ಥೆಯನ್ನು ನೋಡುತ್ತಿದೆ. ಬೈಲಾದಲ್ಲಿ ಮಾರಕವಾಗುವ ಅಂಶಗಳು‌‌ ಇದ್ದರೆ ಕೋರ್ಟಿನಿಂದ ತಡೆಯಾಜ್ಞೆ ತರಬೇಕು ವೆಂಕಟ್ರಮಣ ಭಟ್ ತಿಳಿಸಿದರು.

ಎಲ್ಲಾ ‌ಸಹಕಾರಿ ಸಂಸ್ಥೆಗಳು ಒಟ್ಟಾಗಿ ತಡೆಯಾಜ್ಞೆ ತರುವುದಕ್ಕೆ ಕೈ ಜೋಡಿಸಿದರೆ ಪ್ರಯೋಜನವಾಗಬಹುದು ಎಂದು ಗಿರಿಜಾಶಂಕರ ರವರು ಸಲಹೆ ನೀಡಿದರು.

ಸಂಘದ ಸದಸ್ಯರು ನೋಂದಾವಣೆ ಮಾಡಲು ಸರತಿಯ ಸಾಲಿನಲ್ಲಿ ನಿಂತು ಗಂಟೆ ಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ.ಇದಕ್ಕೆ ಪರ್ಯಾಯ ವ್ಯವಸ್ಥೆ ಆಡಳಿತ ಮಂಡಳಿ ‌ಮಾಡಬೇಕೆಂದು‌ ಲೋಲಜಾಕ್ಷ ಭೂತಕಲ್ಲು ರವರು ಪ್ರಸ್ತಾಪಿಸಿದರು.
ಆಲೆಟ್ಟಿ, ಕೋಲ್ಚಾರು ,ಅರಂಬೂರು ಪ್ರತ್ಯೇಕ ನೋಂದಾವಣಾ ಕೌಂಟರ್ ತೆರೆಯುವ ಬಗ್ಗೆ ಮುಂದಿನ ವರ್ಷ ಆಲೋಚನೆ ಮಾಡಲಾಗುವುದು ಎಂದು ಶ್ರೀಪತಿ ಭಟ್ ಉತ್ತರಿಸಿದರು.

ಸಂಘದ ಆದಾಯ ಹೆಚ್ಚಿಸುವ ದೃಷ್ಟಿಯಿಂದ ಕೃಷಿಕರಿಗೆ ಅವಶ್ಯಕ ವಸ್ತುಗಳ ‌ ಮಾರಾಟ ಕೇಂದ್ರ ತೆರಯುವ ಬಗ್ಗೆ ಚರ್ಚಿಸಲಾಗಿದೆ. ಸ್ವಂತ ಜಾಗದಲ್ಲಿ ಕಟ್ಟಡ ನಿರ್ಮಿಸುವ ಕುರಿತು ಆಡಳಿತ ಮಂಡಳಿಯ ಒಪ್ಪಿಗೆಯನ್ನು ಪಡೆದು ಮುಂದುವರಿಸಲಾಗುವುದು.ಈಗಾಗಲೇ ಸಂಘದ ವತಿಯಿಂದವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ದತ್ತಿ ನಿಧಿ ನೀಡಲಾಗುತ್ತಿದೆ ಎಂದು ಅಧ್ಯಕ್ಷರು ಸಭೆಗೆ ತಿಳಿಸಿದರು.
ಈ ಸಂದರ್ಭದಲ್ಲಿ ಮಹಾ ಪ್ರ ಸ್ಥಾನ ನಿಧಿಗೆ ದೇಣಿಗೆ ನೀಡಿದ ಸದಸ್ಯರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಉಪಾಧ್ಯಕ್ಷ ಸುಧಾಕರ ಆಲೆಟ್ಟಿ, ಆಲೆಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವೀಣಾ ಕುಮಾರಿ ಆಲೆಟ್ಟಿ, ನಿರ್ದೇಶಕರಾದ ಶ್ರೀಪತಿ ಭಟ್ ಮಜಿಗುಂಡಿ,
ಜಯಪ್ರಕಾಶ್ ಕುಂಚಡ್ಕ, ಹರೀಶ್ ಕೆ.ಜೆ,
ಸುದರ್ಶನ ಪಾತಿಕಲ್ಲು, ಸೂರ್ಯನಾರಾಯಣ ನಾಯಕ್ ಅಂಜಿಕಾರ್, ಗಂಗಾಧರ ಎನ್.ಎ, ಶಿವರಾಮ ನಾಯ್ಕ್ ಕಾಪುಮಲೆ, ತಂಗವೇಲು ನಾಗಪಟ್ಟಣ, ಶ್ರೀಮತಿ ಶ್ರೀದೇವಿ ಭಟ್ ಮಜಿಗುಂಡಿ, ಶ್ರೀಮತಿ ವೇದಾವತಿ ಎ.ಎಸ್.ಆಲೆಟ್ಟಿ ಉಪಸ್ಥಿತರಿದ್ದರು.
ಮುಖ್ಯಕಾರ್ಯನಿರ್ವಹಣಾಧಿಕಾರಿ ದಿನಕರ‌ ಎ. ವಾರ್ಷಿಕ ವರದಿ ಮಂಡಿಸಿದರು. ಸಿಬ್ಬಂದಿ ವರ್ಗದವರು ಸಹಕರಿಸಿದರು.