ಬೆಳ್ಳಾರೆ ಹೋಲಿ ಕ್ರಾಸ್ ಚರ್ಚಿನಲ್ಲಿ ವಾರ್ಷಿಕ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು,. ಬೆಳ್ಳಾರೆ ದೇವಾಲಯ ಪವಿತ್ರ ಶಿಲುಬೆಗೆ ಸಮರ್ಪಿತವಾದ ದೇವಾಲಯ ಸಪ್ಟೆಂಬರ್ 17ರಂದು ಸಂಜೆ ಆರು ಗಂಟೆಗೆ ಈ ವಾರ್ಷಿಕ ಹಬ್ಬದ ಪೂಜಾ ಬಲಿದಾನದ ವಿಧಿ ವಿಧಾನಗಳು ನೆರವೇರಿದವು.
ಮಂಗಳೂರು ಧರ್ಮ ಪ್ರಾಂತ್ಯದ ಹಿಂದಿನ ಬಿಷಪರಾದ ಲೂಯಿಸ್ ಪೌಲ್ ಡಿಸೋಜರವರು ಬಲಿ ಪೂಜೆಯನ್ನು ಅರ್ಪಿಸಿದರು ಪುತ್ತೂರು ಧರ್ಮ ಪ್ರಾಂತ್ಯದ ಪ್ರಧಾನ ಯಾಜಕರಾದ ಲಾರೆನ್ಸ್ ಮಸ್ಕರೇನಸ್, ಇವರು ಧರ್ಮಧ್ಯಕ್ಷರನ್ನು ಹೂ ಗುಚ್ಚ ನೀಡಿ ಸ್ವಾಗತಿಸಿದರು,ಫಾದರ್ ಪೀಟರ್ ಗೊನ್ಸಲಿಸ್, ಪ್ರವಚನ ನೀಡಿದರು, ಫಾದರ್ ಅಶೋಕ್ ಡಿಸೋಜಾ, ಫಾದರ್ ರೂಪೇಶ್ ವಲೇರಿಯನ್ ಡಿಸೋಜಾ ಫಾದರ್ ವಿಕ್ಟರ್ ಡಿಸೋಜಾ, ಫಾದರ್ ಪ್ರಕಾಶ್ ಡಿಸೋಜ, ಫಾದರ್ ಜಗದೀಶ್ ಪಿಂಟೋ, ಫಾದರ್ ಅಬೆಲ್ ಲೋಬೊ, ಫಾದರ್ ವಿನ್ಸೆಂಟ್ ಡಿಸೋಜಾ, ಫಾದರ್ ದೀಪಕ್ ಡೆಸ
ಹೀಗೆ ಹಲವಾರು ಬೇರೆ ಬೇರೆ ಚರ್ಚಿನ ಧರ್ಮ ಗುರುಗಳಾದ ಸುಮಾರು 20 ಧರ್ಮ ಗುರುಗಳು ಈ ಸಂಭ್ರಮದ ಬಲಿ ಪೂಜೆಯಲ್ಲಿ ಭಾಗವಹಿಸಿದರು. ಬೆಳ್ಳಾರೆ ದೇವಾಲಯದ ಧರ್ಮ ಗುರುಗಳಾದ ವಂದನೀಯ ಆಂಟನಿ ಪ್ರಕಾಶ್ ಮೊಂತೆರೊ ಎಲ್ಲರನ್ನು ಆದರದಿಂದ ಸ್ವಾಗತಿಸಿ ಹಬ್ಬದ ಶುಭಾಶಯಗಳನ್ನು ಕೋರಿದರು ಹಬ್ಬದ ಬಲಿ ಪೂಜೆಯನ್ನು ಸಂಭ್ರಮದಿಂದ ಆಚರಿಸಲಾಯಿತು ಎಲ್ಲ ಚರ್ಚಿನ ಭಕ್ತಾದಿಗಳು ಈ ಹಬ್ಬದ ಪೂಜೆಯಲ್ಲಿ ಭಾಗವಹಿಸಿ ಪವಿತ್ರ ಶಿಲುಬೆಯ ಆಶೀರ್ವಾದ ಪಡೆದು ಪುನೀತರಾದರು.
ಪೂಜಾ ವಿಧಿ ವಿಧಾನಗಳ ನಂತರ ಐ ಸಿ ವೈ ಮ್ ವತಿಯಿಂದ ಕೆಲವು ಮನೋರಂಜನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು ನಂತರ ಎಲ್ಲ ಭಕ್ತಾದಿಗಳಿಗೆ ಯಾ ಜಕರಿಗೆ ಭೋಜನದ ವ್ಯವಸ್ಥೆ ಏರ್ಪಡಿಸಲಾಗಿತ್ತು.