ಸೆ.19 ರಂದು ಕೋಟೆ ಮುಂಡುಗಾರಿನಲ್ಲಿ 32 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

0

ಮಕ್ಕಳ ತಂಡ ಮತ್ತು ಹವ್ಯಾಸಿ ಕಲಾವಿದರಿಂದ ಯಕ್ಷಗಾನ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಟೆ ಮುಂಡುಗಾರು ವತಿಯಿಂದ ಸೆ.19 ರಂದು ಕೋಟೆಮುಂಡುಗಾರು ಶಾಲಾ ವಠಾರದಲ್ಲಿ 32 ನೇ ವರ್ಷದ ಶ್ರೀ ಗಣೇಶೋತ್ಸವ ನಡೆಯಲಿದೆ.

ಬೆಳಿಗ್ಗೆ ಮೂರ್ತಿ ಪ್ರತಿಷ್ಠಾಪನೆ ಬಳಿಕ ಶ್ರೀ ಮಂಜುನಾಥ ಭಜನಾ ಮಂಡಳಿ ಕೋಟೆಮುಂಡುಗಾರು ಇವರಿಂದ ಭಜನೆ ನಡೆಯಲಿದೆ. ಬಳಿಕ ಗಣಪತಿ ಹವನ,ಮಕ್ಕಳ ಅಕ್ಷರಾಭ್ಯಾಸ ನಡೆದು ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆದು, ಗಣೇಶೋತ್ಸವ ದಿನ ನಡೆದ ಸ್ಪರ್ಧೆಗಳ ಬಹುಮಾನ ವಿತರಣೆ ನಡೆಯಲಿದೆ, ಮಧ್ಯಾಹ್ನ ಪ್ರಸಾದ ಭೋಜನ ನಡೆಯಲಿದೆ. ಅಪರಾಹ್ನ ಗಂಟೆ 3.00ರಿಂದ ಯುವಕ ಮಂಡಲ ಕಳಂಜ ಮತ್ತು ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ ಸಹಯೋಗದಲ್ಲಿ ತರಬೇತಿ ಪಡೆದ ಮಕ್ಕಳ ತಂಡದಿಂದ ” ಶೂರ್ಪನಖಾ ಮಾನಭಂಗಾ – ಖರಾಸುರ ವಧೆ” ಯಕ್ಷಗಾನ ನಡೆಯಲಿದೆ, ಬಳಿಕ ಯುವಕ ಮಂಡಲ‌ ಕಳಂಜ ಇದರ ಹವ್ಯಾಸಿ ಕಲಾವಿದರಿಂದ “ಇಂದ್ರಜಿತು ಕಾಳಗ” ಯಕ್ಷಗಾನ ಪ್ರದರ್ಶನ ನಡೆಯಲಿದೆ. ಬಳಿಕ ಸಂಜೆ ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ ಗಂಟೆ 7.00 ರಿಂದ ಕೋಟೆಮುಂಡುಗಾರಿನಿಂದ ಶೋಭಾಯಾತ್ರೆ ರಸ್ತೆಯಲ್ಲಿ ಸಾಗಿ ಅಯ್ಯನಕಟ್ಟೆ ಹೊಳೆಯಲ್ಲಿ ಮೂರ್ತಿವಿಸರ್ಜನೆ ನಡೆಯಲಿದೆ.