ಹರಿಹರ: ಸಂಭ್ರಮದ 14ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ

0

ವೈದಿಕ -ವಿಧಿವಿಧಾನಗಳೋಂದಿಗೆ ವೈಭವದ ಶೋಭಯಾತ್ರೆ, ಮೂರ್ತಿ ವಿಸರ್ಜನೆ

ಹರಿಹರ; ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ವತಿಯಿಂದ 14ನೇ ವರ್ಷದ ಶ್ರೀ ಗಣೇಶೋತ್ಸವದ ಧಾರ್ಮಿಕ ಕಾರ್ಯಕ್ರಮ ಸೆಪ್ಟಂಬರ್ 18ರಿಂದ 20ವರೆಗೆ ಶ್ರೀ ಹರಿಹರೇಶ್ವರ ದೇವಸ್ಥಾನದ ವಠಾರದಲ್ಲಿ ವೈಭವದಿಂದ ನಡೆಯಿತು.

ಸೆ.18ರಂದು ಬೆಳಗ್ಗೆ ಶ್ರೀ ಗೌರಿ ಮೂರ್ತಿ ಪ್ರತಿಪ್ಠಾಪನೆ ಹಾಗು ಗೌರಿ ಪೂಜೆ ನಡೆದು ರಾತ್ರಿ ಗೌರಿ ದೇವಿಗೆ ಮಹಾಪೂಜೆ ನಡೆಯಿತು.

ಸೆ. 19ರಂದು ಬೆಳಗ್ಗೆ ಶ್ರೀ ಗಣಪತಿ ದೇವರ ಮೂರ್ತಿ ಪ್ರತಿಪ್ಠೆ ನಡೆದು ಗಣಪತಿ ಪೂಜೆ, ಸಾಮೂಹಿಕ ಗರಿಕೆ ಹವನ,ಪೂರ್ಣಾಹುತಿ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಿತು. ನಂತರ ಭಕ್ತಾದಿಗಳಿಗೆ ಸಾರ್ವಜನಿಕ ಅನ್ನಸಂತರ್ಪಣೆ ನೆರವೆರಿತು. ರಾತ್ರಿ ರಚಿತ ಇಜಿಲುಮಕ್ಕಿ ಗುತ್ತಿಗಾರು ಸಾರಥ್ಯದ ನೃತ್ಯ ಸಾರಂಗ ಕಲಾ ಕುಟೀರ ಪ್ರಸ್ತತ ಪಡಿಸುವ ಸಾಂಸ್ಕೃತಿಕ ನೃತ್ಯ ವೈಭವ ಹಾಗು ರೂಪಕ ನಡೆಯಿತು.


ಪ್ರತಿದಿನ ಸಂಜೆ ಶ್ರೀ ದುರ್ಗಾ ಭಜನಾ ಮಂಡಳಿ ಬಾಳುಗೋಡು,ಶ್ರೀ ದುರ್ಗಾ ಭಜನಾ ಮಂಡಳಿ ನಡುಗಲ್ಲು,ಚಾಮುಂಡೇಶ್ವರಿ ಭಜನಾ ತಂಡ ಹರಿಹರ ಪಲ್ಲತ್ತಡ್ಕ, ಹರಿಹರೇಶ್ವರ ಭಜನಾ ತಂಡ ದಾಸ ಸಾಹಿತ್ಯ ಪ್ರಾಜೆಕ್ಟ್ ತಿರುಪತಿ ತಿರುಮಲ ಇವರಿಂದ ಭಜನೆ ನಡೆಯಿತು

ಸೆ. 20ರಂದು ಪ್ರಾತ:ಕಾಲ ಶ್ರೀ ಗಣಪತಿ ದೇವರಿಗೆ ಪೂಜೆ ನಡೆದು, ದೇವರ ವೈಭವದ ಶೋಭಾಯಾತ್ರೆ ಚೆಂಡೆ ವಾದನ,ಹುಲಿವೇಷ,ಕುಣಿತ ಭಜನೆ,ಗೊಂಬೆಕುಣಿತದೊಂದಿಗೆ ಶ್ರೀ ಹರಿಹರೇಶ್ವರ ದೇವಸ್ಥಾನದಿಂದ ಹೊರಟು ಐನೆಕಿದು,ಕೋಟೆ, ಬಾಳುಗೋಡು ಮಾರ್ಗವಾಗಿ ಹರಿಹರ ಪೇಟೆಗೆ ಬಂದು ಸಂಗಮ ಕ್ಷೇತ್ರದಲ್ಲಿ ಸಂಜೆ ಶ್ರೀ ಗೌರಿ ಹಾಗು ಗಣಪತಿ ದೇವರ ವಿಸರ್ಜನೆ ನಡೆಯಿತು. ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಮೆರವಣಿಗೆ ಸಾಗುವ ದಾರಿಯ ಅಲ್ಲಲ್ಲಿ ಭಕ್ತಾದಿಗಳಿಂದ ಲಘು ಪಾನಿಯ ಹಾಗು ಉಪಹಾರದ ವ್ಯವಸ್ಥೆ ಮಾಡಲಾಯಿತು. ಗಣೇಶೋತ್ಸವ ಸಮಿತಿ ಸದಸ್ಯರು, ಆಡಳಿತ ಮಂಡಳಿ ಸದಸ್ಯರು, ಊರ ಭಕ್ತರು ಉಪಸ್ಥಿತರಿದ್ದರು.

ವರದಿ:ಕುಶಾಲಪ್ಪ ಕಾಂತುಕುಮೇರಿ