ಸಹಕಾರಿಗಳ ಅಭಿವೃದ್ಧಿ ರಂಗದ 13 ಮಂದಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿಗೆ ನಿರ್ದೇಶಕರುಗಳ ಆಯ್ಕೆಗೆ ಡಿ.23ರಂದು ಚುನಾವಣೆ ಜರುಗಲಿದ್ದು, ಸೋಮಶೇಖರ ಕೊಯಿಂಗಾಜೆ ಅವರ ನೇತೃತ್ವದ ಸಹಕಾರಿ ಅಭಿವೃದ್ಧಿ ರಂಗದ 13 ಮಂದಿ ಅಭ್ಯರ್ಥಿಗಳು ಡಿ.14ರಂದು ಚುನಾವಣಾಧಿಕಾರಿಗಳಿಗೆ ತಮ್ಮ ನಾಮಪತ್ರ ಸಲ್ಲಿಸಿದರು.
ಸಾಮಾನ್ಯ ಸ್ಥಾನದಿಂದ ಸೋಮಶೇಖರ ಕೊಯಿಂಗಾಜೆ, ಮಹಮ್ಮದ್ ಕುಂಞಿ ಗೂನಡ್ಕ, ಕೆ.ಆರ್. ಜಗದೀಶ್ ರೈ, ಕೆ.ಪಿ. ಜಾನಿ ಕಲ್ಲುಗುಂಡಿ, ಜ್ಞಾನಶೀಲನ್ (ರಾಜು) ಸಂಜೀವ ಪೂಜಾರಿ , ಸಿಲ್ವೆಸ್ಟರ್ ಡಿಸೋಜ, ಚಿದಾನಂದ ಗೂನಡ್ಕ, ಸಾಮಾನ್ಯ ಮಹಿಳಾ ಮೀಸಲು ಕ್ಷೇತ್ರದಿಂದ ಶ್ರೀಮತಿ ಯಮುನ ಬಿ.ಎಸ್., ಶ್ರೀಮತಿ ಪ್ರಮೀಳಾ ಪೆಲ್ತಡ್ಕ ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಶ್ರೀಮತಿ ಉಷಾ ರಾಮ ನಾಯ್ಕ, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಶ್ರೀಮತಿ ಸುಶೀಲ ಬಾಲಕೃಷ್ಣ, , ಹಿಂದುಳಿದ ವರ್ಗ ಪ್ರವರ್ಗ ಎ. ಕ್ಷೇತ್ರದಿಂದ ಪಿ.ಕೆ. ಅಬುಸಾಲಿ ಗೂನಡ್ಕ, ಹಿಂದುಳಿದ ವರ್ಗ ಪ್ರವರ್ಗ ಬಿ ಕ್ಷೇತ್ರದಿಂದ ಸೋಮಶೇಖರ ಕೊಯಿಂಗಾಜೆ, ಜಗದೀಶ್ ರೈ ಸಂಪಾಜೆ ಅವರು ನಾಮಪತ್ರಗಳನ್ನು ಸಲ್ಲಿಸಿದರು.