ಗ್ರಾಮೀಣ ಪ್ರದೇಶದ ಯುವತಿಯರು ಪ್ರದರ್ಶನ ನೀಡಲು ಸಿದ್ಧ
ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ದೆಹಲಿ ಘಟಕ ಮತ್ತು ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ ಬೆಳ್ಳಾರೆ ಆಯೋಜಿಸುವ ಯಕ್ಷದ್ರುವ ಪಟ್ಲ ಸಂಭ್ರಮ ೨೦೨೩ ಸೆ.೩೦ರಂದು ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದ ಪ್ರಯುಕ್ತ ಗ್ರಾಮೀಣ ಯುವತಿಯರನ್ನೊಳಗೊಂಡ ನಿನಾದ ಸಾಂಸ್ಕೃತಿ ತಂಡದಿಂದ ನೃತ್ಯ ಕಾರ್ಯಕ್ರಮವೂ ನಡೆಯಲಿದೆ. ಅಪರಾಹ್ನ ೩.೩೦ ರಿಂದ ಯಕ್ಷದ್ರುವ ಪಟ್ಲ ಫೌಂಡೇಶನ್ ಮಂಗಳೂರು ಇವರಿಂದ ಮಾಯಾ ಮೋಹಿನಿ ವೀರ ಭಾರ್ಗವ ಯಕ್ಷಗಾನ ನಡೆಯಲಿದೆ ಹಾಗೂ ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ ಬೆಳ್ಳಾರೆ ಇವರಿಂದ ಪಜ್ಜೆ – ಗೆಜ್ಜೆ ತುಳು, ಕನ್ನಡ ಜಾನಪದ ಮತ್ತು ಶಾಸ್ತ್ರೀಯ ನೃತ್ಯ ಕಾರ್ಯಕ್ರಮ ನಡೆಯಲಿದೆ.
ದೆಹಲಿಯಲ್ಲಿ ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ ಬೆಳ್ಳಾರೆ ವತಿಯಿಂದ ಸೆ.೩೦ ಪಜ್ಜೆ ಗೆಜ್ಜೆ ನೃತ್ಯ ಕಾರ್ಯಕ್ರಮ ನೀಡಲಿರುವ ವಿದ್ಯಾರ್ಥಿಗಳೇ ಅ.೨ ರಂದು ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಜಮ್ಮು ಕಾಶ್ಮೀರದ ಸರ್ಕಾರ ಆಯೋಜಿಸಿದ ಕಾರ್ಯಕ್ರಮದಲ್ಲೂ ನೃತ್ಯ ಪ್ರದರ್ಶನ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ಒಂದೂವರೆ ತಿಂಗಳಿನಿಂದ ನಿನಾದ ಸಾಂಸ್ಕೃತಿಕ ಕೇಂದ್ರದ ವಸಂತ ಶೆಟ್ಟಿ ಬೆಳ್ಳಾರೆಯವರ ಮಾರ್ಗದರ್ಶನದಲ್ಲಿ ಸ್ಥಳೀಯ ಹಾಗೂ ಆಯ್ದ ಗ್ರಾಮಗಳ ವಿದ್ಯಾರ್ಥಿನಿಗಳ ಸೇರಿಸಿ ನೃತ್ಯ ತರಬೇತಿ ನೀಡಲಾಗುತ್ತಿದೆ. ಪ್ರಮೋದ್ ರೈ ಬೆಳ್ಳಾರೆ ಮತ್ತು ಮಂಜುಶ್ರೀ ರಾಘವ್ ನೃತ್ಯ ತರಬೇತಿ ನೀಡುತ್ತಿದ್ದಾರೆ.
ಕಳಂಜ ಗ್ರಾಮದ ಕಜೆಮೂಲೆ ದಿ. ಮೋನಪ್ಪ ಗೌಡ ಮತ್ತು ನೀಲಮ್ಮ ದಂಪತಿಗಳ ಪುತ್ರಿ ಭವ್ಯಕುಮಾರಿ, ಕಳಂಜ ಗ್ರಾಮದ ಮೋನಪ್ಪ ಮತ್ತು ರೇಖಾ ದಂಪತಿಗಳ ಪುತ್ರಿ ಗೀತಾಶ್ರೀ, ಅಮರ ಪಡ್ನೂರು ಗ್ರಾಮದ ನಾಟಿಕೇರಿ ಮಹಾಲಿಂಗೇಶ್ವರ ಭಟ್ ಮತ್ತು ಮಮತಾ ದಂಪತಿಗಳ ಪುತ್ರಿ ಅಭಿಜ್ಞಾ, ಮುರುಳ್ಯ ಗ್ರಾಮದ ಕೊಡ್ಡೋಳು ಶೀನಪ್ಪ ಗೌಡ ಮತ್ತು ದಮಯಂತಿ ದಂಪತಿಗಳ ಪುತ್ರಿ ಗೀತಾ, ಕಳಂಜ ಗ್ರಾಮದ ಕಜೆಮೂಲೆ ಮಾಧವ ಗೌಡ ಮತ್ತು ಯೋಗಿತ ದಂಪತಿಗಳ ಪುತ್ರಿ ಪೂಜಿತ ಕೆ.ಎಂ, ಏನೆಕಲ್ಲು ಗ್ರಾಮದ ವೇಣುಗೋಪಾಲ ಮತ್ತು ಭವಾನಿ ದಂಪತಿಗಳ ಪುತ್ರಿ ಹಂಸನಂದಿನಿ, ಗುತ್ತಿಗಾರು ಇಜ್ಜೆಲುಮಕ್ಕಿ ಯ ಶಾಂತಪ್ಪ ಮತ್ತು ಸುನಿತ ದಂಪತಿಗಳ ಪುತ್ರಿ ರಚಿತಾ, ಅಮರ ಪಡ್ನೂರು ಗ್ರಾಮದ ನೆಲ್ಲಿಗುಡ್ಡೆ ರಾಧಾಕೃಷ್ಣ ಮತ್ತು ಜಯಶ್ರೀ ದಂಪತಿಗಳ ಪುತ್ರಿ ಜೀವಿತಾ, ಅಮರ ಪಡ್ನೂರು ಗ್ರಾಮದ ಶಂಕರನಾರಾಯಣ ಮತ್ತು ತುಷಾರ ದಂಪತಿಗಳ ಪುತ್ರಿ ಅಕ್ಷತಾ, ಕಳಂಜ ಗ್ರಾಮದ ಕೃಷ್ಣನಾಯ್ಕ ಮತ್ತು ಸರೋಜಿನಿ ದಂಪತಿಗಳ ಪುತ್ರಿ ಮಲ್ಲಿಕಾ ಕೆ ಎಸ್, ಐವತೊಕ್ಲು ಗ್ರಾಮದ ಪಲ್ಲೋಡಿ ಮನೆ ಪ್ರೇಮಾನಂದ ಶೆಟ್ಟಿ ಮತ್ತು ಸುಮಾ ದಂಪತಿಗಳ ಪುತ್ರಿ ಪೃಥ್ವಿ ಪಿ. ಶೆಟ್ಟಿ, ಕೊಳ್ತಿಗೆ ಗ್ರಾಮದ ಅಣ್ಣಿ ಪೂಜಾರಿ ಮತ್ತು ರೇವತಿ ದಂಪತಿಗಳ ಪುತ್ರಿ ಅಭಿಜ್ಞಾ ಆಲಂಕಾರು ಮುರಳಿಕೃಷ್ಣ, ಮತ್ತು ಹರಿಣಿ ಎಂ.ಕೆ. ದಂಪತಿಗಳ ಪುತ್ರಿ ರಕ್ಷಿತಾ ಈ ನೃತ್ಯ ತಂಡದಲ್ಲಿದ್ದು ದೆಹಲಿ, ಶ್ರೀನಗರಕ್ಕೆ ತೆರಳಲಿದ್ದಾರೆ.