ಪಂಜ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲೇ ಹರಿಯುತ್ತಿರುವ ನೀರು

0

ಪಂಜ ಗುತ್ತಿಗಾರು ರಸ್ತೆಯಲ್ಲಿ ಚರ್ಚ್ ಮುಂಭಾಗ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆಯಲ್ಲಿ ಹರಿದು ರಸ್ತೆ ಹೊಳೆಯಾಗಿ ಮಾರ್ಪಟ್ಟಿದೆ. ಕಾರು, ಇನ್ನಿತರ ಘನ ವಾಹನಗಳು ಚಲಿಸುವಾಗ ದ್ವಿಚಕ್ರ ವಾಹನ ಚಾಲಕರು, ನಡೆದು ಹೋಗುವವರ ಮೇಲೆ ಕೆಸರು ನೀರಿನ ಸಿಂಚನವಾಗುತ್ತದೆ. ಸಂಬಂಧಿಸಿದ ಇಲಾಖೆಯವರು ಈ ಕಡೆ ಗಮನಹರಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.