ಮೂಲಭೂತ ಸೌಕರ್ಯಗಳ ಕುರಿತು ಚರ್ಚೆ
ಸಂಪಾಜೆ ಗ್ರಾಮ ಪಂಚಾಯತಿ 2022-23ನೇ ಸಾಲಿನ ದ್ವಿತೀಯ ಹಂತದ ಗ್ರಾಮಸಭೆಯು ಗ್ರಾಮ ಪಂಚಾಯತಿ ಸಭಾಭವನದಲ್ಲಿ ಸೆ.30ರಂದು ನಡೆಯಿತು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಸುಮತಿ ಶಕ್ತಿವೇಲು ಅವರು ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಶ್ರೀಮತಿ ಶೈಲಜಾ ಅವರು ನೋಡೆಲ್ ಅಧಿಕಾರಿಯಾಗಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಶ್ರೀಮತಿ ಪದ್ಮಾವತಿ ಅವರು ವಾರ್ಷಿಕ ವರದಿ ಮಂಡಿಸಿದರು.
ಸಭೆಯಲ್ಲಿ ಕುಡಿಯುವ ನೀರು, ರಸ್ತೆ, ಬೀದಿದೀಪ ಸೇರಿದಂತೆ ಮೂಲಭೂತ ಸೌಕರ್ಯಗಳ ಕುರಿತಂತೆ ಚರ್ಚಿಸಲಾಯಿತು.
ಇಲಾಖಾ ಅಧಿಕಾರಿಗಳು ಇಲಾಖೆಯ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಸಭೆಯಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರಿತಾ ಡಿಸೋಜ, ಉಪಾಧ್ಯಕ್ಷ ಎಸ್.ಕೆ. ಹನೀಫ್ ಸಂಪಾಜೆ,ಸದಸ್ಯರುಗಳಾದ ಸೋಮಶೇಖರ ಕೊಯಿಂಗಾಜೆ, ಜಿ.ಕೆ. ಹಮೀದ್, ಜಗದೀಶ್ ರೈ ಸಂಪಾಜೆ, ಅಬೂಸಾಲಿ ಗೂನಡ್ಕ, ಶೌವಾದ್ ಗೂನಡ್ಕ, ವಿಜಯ ಆಲಡ್ಕ, ಶ್ರೀಮತಿ ಸುಂದರಿ ಮುಂಡಡ್ಕ, ಶ್ರೀಮತಿ ರಜನಿ, ಶ್ರೀಮತಿ ವಿಮಲ, ಶ್ರೀಮತಿ ಸುಶೀಲಾ, ಶ್ರೀಮತಿ ಅನುಪಮ, ಶ್ರೀಮತಿ ಲಿಸ್ಸಿ ಮೊನಾಲಿಸಾ ಸೇರಿದಂತೆ ಇಲಾಖಾ ಅಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.