ಝೈನ್ ಎಕ್ಸೆಲೆನ್ಸ್ ಫಾರ್ ಮೋರೆಲ್ ಎಜುಕೇಷನ್ ಎಸ್ ಕೆ ಎಸ್ ಎಸ್ ಎಫ್ ಅಡ್ಕ ಇರುವಂಬಳ್ಳ ಶಾಖೆ ವತಿಯಿಂದ ಹಾಜಿ ಮಂಡೆಕೋಲು ಎಂ ಎ ಅಬ್ದುಲ್ಲಾ ಉಸ್ತಾದ್ ಮಂಡೆಕೋಲು ರವರ ವೇದಿಕೆ ರಿಪಾಇಯ್ಯ ಮಸ್ಜಿದ್ ನಲ್ಲಿ ಪ್ರತಿ ತಿಂಗಳು ನಡೆಸಲ್ಪಡುವ ಐತಿಹಾಸಿಕ ಗ್ರಾಂಡ್ ಮಜ್ಲಿಸುನ್ನೂರ್ ಮತ್ತು ಮದ್ಹ್ ರಸೂಲ್ ಪ್ರಭಾಷಣ ಇಂದು ಮಗ್ರಿಬ್ ನಮಾಝ್ ಬಳಿಕ ನಡೆಯಲಿದೆ.
ಕಾರ್ಯಕ್ರಮದಲ್ಲಿ ಶಂಸುಲ್ ಉಲಮಾ ಮೌಲೀದ್ ಕಾರ್ಯಕ್ರಮ ಝೈನಿಯಾ ಪ್ರಾಂಶುಪಾಲರು ಉಸ್ತಾದ್ ಅಬ್ದುಲ್ಲಾ ನಿಝಾಮಿ, ಮದ್ಹ್ ರಸೂಲ್ ಪ್ರಭಾಷಣ ಝೈನಿಯಾ ಅಧ್ಯಕ್ಷರು ಅನ್ವರ್ ಅಲಿ ದಾರಿಮಿ, ಮಜ್ಲಿಸುನ್ನೂರ್ ನೇತೃತ್ವ ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ಉಸ್ತಾದ್ ಅಬ್ದುಸಲಾಂ ದಾರಿಮಿ ಆಲಂಬಾಡಿ ರವರ ನೇತೃತ್ವದಲ್ಲಿ ನಡೆಯಲಿದೆ .
ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು , ಹಿತೈಷಿಗಳು , ಆಗಮಿಸಲಿದ್ದು.
ಝೈನಿಯಾ ಸಂಘಟನಾಧ್ಯಕ್ಷರಾದ ಹಾರಿಸ್ ಕಲ್ತಡ್ಕ ರವರು ಅಧ್ಯಕ್ಷತೆ ವಹಿಸಿ ಸಂಚಾಲಕರಾದ ಮುಹಿಯ್ಯದ್ದೀನ್ ಅನ್ಸಾರಿ ಸ್ವಾಗತಿಸಲಿದ್ದಾರೆ.